Kodagu

ಸಾಮರಸ್ಯ ವೇದಿಕೆಯಿಂದ ಸುಂಟಿಕೊಪ್ಪದ ದಲಿತ ಮನೆಗಳಲ್ಲಿ ಸಾಮರಸ್ಯ ಜ್ಯೋತಿ

admincoorgdaily

ಸಾಮರಸ್ಯ ವೇದಿಕೆಯಿಂದ ಸುಂಟಿಕೊಪ್ಪದ ದಲಿತ ಮನೆಗಳಲ್ಲಿ ಸಾಮರಸ್ಯ ಜ್ಯೋತಿ
ಕುಶಾಲನಗರ : ಸಾಮರಸ್ಯ ವೇದಿಕೆ ಕೊಡಗು ಜಿಲ್ಲೆ - ಕುಶಾಲನಗರ ತಾಲೂಕು ವತಿಯಿಂದ ಸುಂಟಿಕೊಪ್ಪ ಚಾಮುಂಡೇಶ್ವರಿ ಬಡಾವಣೆಯ
ದಲಿತ ಬಂಧುಗಳ ಕಾಲೋನಿಯಲ್ಲಿ 
ದೀಪಾವಳಿ ಕಾರ್ಯಕ್ರಮ ಆಚರಿಸಲಾಯಿತು. 

ಚಾಮುಂಡೇಶ್ವರಿ ದೇವಸ್ಥಾನದಲ್ಲಿ  ಗರ್ಭಗುಡಿಯಿಂದ ಅರ್ಚಕರು ದೀಪವನ್ನು ಹಚ್ಚಿ ಬಸವರಾಜ್  ದಂಪತಿಯ ಕೈಗೆ ನೀಡಿದರು. 
ಗೋ ಪೂಜೆಯೊಂದಿಗೆ 
ಸಾಮರಸ್ಯ ಜ್ಯೋತಿ ಬಡಾವಣೆಯ ಪ್ರತಿ ಮನೆಯಲ್ಲಿ ಬೆಳಗಿತು. ಚಿ. ನಾ. ಸೋಮೇಶ್ ಮಾತನಾಡಿ ಸಮಾಜದಲ್ಲಿ ಇರುವ ಅಸ್ಪೃಶ್ಯತೆ,  ಜಾತಿ ತಾರತಮ್ಯ ತೊಲಗಿ ಸಾಮರಸ್ಯ ಬದುಕು ನಮ್ಮದಾಗಲಿ. ದೀಪಾವಳಿ ಎಲ್ಲರ ಬದುಕಿನಲ್ಲಿ ಹೊಸ ಬೆಳಕು ತರಲಿ ಎಂದು ಹಾರೈಸಿದರು.

ಸೋಮವಾರಪೇಟೆ ಬಸವ ಕುಮಾರ  ಶಾಸ್ತ್ರಿಗಳು ದಲಿತ ಬಂಧುಗಳ ಮನೆಗೆ ತೆರಳಿ ದೀಪ ಹಚ್ಚಿ ಶುಭ ಹಾರೈಸಿದರು.   
ನಂತರ ಎಲ್ಲರೂ ಒಟ್ಟಿಗೆ ಪ್ರಸಾದ ಸೇವನೆಯನ್ನು ಮಾಡಲಾಯಿತು.
ಸಾಮರಸ್ಯ ವೇದಿಕೆಯ ಕಾರ್ಯಕರ್ತರಾದ ಶ್ರೀಮತಿ ತುಶಾಲ್  ಸನ್ಮಾನ  ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದ್ದು ಶ್ರೀಮತಿ ಲೀಲಾ ಮೇದಪ್ಪ ವಂದನಾರ್ಪಣೆ ಮಾಡಿದರು.
ಸಾಮರಸ್ಯ ಗತಿ ವಿಧಿಯ ಕಾರ್ಯಕರ್ತರು, ಊರಿನ ಪ್ರಮುಖರು, ದಲಿತ ಬಂಧುಗಳು , ಮಾತೆಯರು  ಉಪಸ್ಥಿತರಿದ್ದರು.