ಚೆಟ್ಟಳ್ಳಿಯಲ್ಲಿ ಹೃದಯ ವಿದ್ರಾವಕ ಘಟನೆ: ವಿದ್ಯುತ್ ಸ್ಪರ್ಶದಿಂದ 3 ವರ್ಷದ ಬಾಲಕ ಸಾವು
admincoorgdaily

ಚೆಟ್ಟಳ್ಳಿ: ಗ್ರಾಮದಲ್ಲಿ ಇಂದು ಸಂಜೆ ಹೃದಯ ವಿದ್ರಾವಕ ಘಟನೆ ನಡೆದಿದೆ.
ಚೆಟ್ಟಳ್ಳಿಯ ಪುತ್ತರಿರ ಶಿವು ನಂಜಪ್ಪ ಮತ್ತು ರತಿ ನಂಜಪ್ಪ ದಂಪತಿಯ ದ್ವಿತೀಯ ಪುತ್ರ ಶಿಯಾನ್ ನಂಜಪ್ಪ (3 ವರ್ಷ) ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾನೆ.
ಮನೆಯ ಬಾಗಿಲಿನ ಬಳಿ ಆಕಸ್ಮಿಕವಾಗಿ ಹರಿದು ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಗೊಂಡು ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.
ಮನೆಯಲ್ಲಿ ಆಟವಾಡುತ್ತಿದ್ದ ಪುಟ್ಟ ಕಂದ ಅಚಾನಕ್ಕಾಗಿ ಸಂಭವಿಸಿದ ದುರಂತದಲ್ಲಿ ಬಲಿಯಾಗಿದ್ದು, ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.