Kodagu

ಬಾಣಂಗಾಲದಲ್ಲಿ ಹೃದಯವಿದ್ರಾವಕ ದುರಂತ: ಕೆರೆಗೆ ಕಾರು ಬಿದ್ದು ತಂದೆ-ತಾಯಿ, 4 ವರ್ಷದ ಮಗಳು ಸಾವು

admincoorgdaily

ಬಾಣಂಗಾಲದಲ್ಲಿ ಹೃದಯವಿದ್ರಾವಕ ದುರಂತ: ಕೆರೆಗೆ ಕಾರು ಬಿದ್ದು ತಂದೆ-ತಾಯಿ, 4 ವರ್ಷದ ಮಗಳು ಸಾವು
ಸಿದ್ದಾಪುರ: ಕೆರೆಯಲ್ಲಿ ಕಾರು ಮುಳುಗಿ, ಪುಟ್ಟ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ಸಿದ್ದಾಪುರ ಸಮೀಪದ ಬಾಣಂಗಾಲ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಸಿದ್ದಾಪುರ ಹೈಸ್ಕೂಲ್ ಪೈಸಾರಿ ನಿವಾಸಿ, ಬಾಣಂಗಾಲ ಗ್ರಾಮದ ಎಲ್ಕ್ ಹಿಲ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ವಿಜೇಶ್ (36), ಪತ್ನಿ ಪಮಿತ (34) ಹಾಗೂ ಮಗಳು ಲಿಯಾ (4) ಮೃತ ದುರ್ದೈವಿಗಳು.

ಸಿದ್ದಾಪುರದಿಂದ ಬಾಣಂಗಾಲ ಗ್ರಾಮದ ಮನೆಗೆ ಮಂಗಳವಾರ ರಾತ್ರಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾರು ನಿಯಂತ್ರಣ ತಪ್ಪಿ ಬಾಣಂಗಾಲ ಕೆರೆಗೆ ಉರುಳಿದೆ. ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬುಧವಾರ ಬೆಳಗ್ಗೆ ತೋಟದ ಕಾರ್ಮಿಕರು ಕೆರೆಯಲ್ಲಿದ್ದ ಕಾರನ್ನು ಕಂಡಿದ್ದು, ಬಳಿಕ ಮೂವರ ಮೃತದೇಹವನ್ನು ಕೆರೆಯಿಂದ ಹೊರತೆಗೆಯಲಾಗಿದೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.