ಗೋಣಿಕೊಪ್ಪದಲ್ಲಿ ನ.17 ರಿಂದ ಹಾಕಿ ಕಪ್ ಉತ್ಸವ - 6 ದಿನ ಹಾಕಿ ಹಬ್ಬ
admincoorgdaily

ಗೋಣಿಕೊಪ್ಪದಲ್ಲಿ ನ.17 ರಿಂದ ಹಾಕಿ ಕಪ್ ಉತ್ಸವ
ಮಡಿಕೇರಿ-ಕೊಡಗು ಜಿಲ್ಲೆಯ ಹಾಕಿ ಕ್ರೀಡೆಯ ಉತ್ತೇಜನ ಹಾಗೂ ಪ್ರತಿಭಾವಂತ ಆಟಗಾರರಿಗೆ ಉತ್ತಮ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕೈಗ್ ಸ್ಪೋಟ್ರ್ಸ್ ಫೌಂಡೇಶನ್ ವತಿಯಿಂದ ಕೈಗ್ ಸ್ಪೋಟ್ರ್ಸ್ ಫೌಂಡೇಶನ್ನ ಸಂಘಟನಾ ಸಮಿತಿ ಹಾಗೂ ಅಮ್ಮತ್ತಿಯ ಕಾವೇರಿ ರಾಯಲ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ಸಹಯೋಗದಲ್ಲಿ ಎರಡನೇ ವರ್ಷದ ‘ಕೈಗ್ ಹಾಕಿ ಕಪ್-2026’ ಹಾಕಿ ಪಂದ್ಯಾವಳಿಯನ್ನು ನವೆಂಬರ್ 17 ರಿಂದ 22 ರ ವರೆಗೆ ಗೋಣಿಕೊಪ್ಪಲಿನ ಕೆಎಎಲ್ಎಸ್/ ಎಎಸ್ಎಫ್ ಹಾಕಿ ಅರೆನಾದಲ್ಲಿ ಆಯೋಜಿಸಲಾಗಿದೆ.
ನವೆಂಬರ್ 17 ರಂದು ಬೆಳಿಗ್ಗೆ 9.30 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ, ಅರ್ಜುನ ಪ್ರಶಸ್ತಿ ಪುರಸ್ಕøತ ಹಾಗೂ ಮಾಜಿ ಒಲಿಂಪಿಯನ್ ಡಾ.ಎ.ಬಿ.ಸುಬ್ಬಯ್ಯ, ಕೊಡವ ಹಾಕಿ ಅಕಾಡೆಮಿಯ ಕಾರ್ಯಾಧ್ಯಕ್ಷ ಹಾಗೂ ಒಲಿಂಪಿಯನ್ ಚೆಪ್ಪುಡಿರ ಪೂಣಚ್ಚ, ಅಂತರರಾಷ್ಟ್ರೀಯ ಹಾಕಿ ಆಟಗಾರ ಹಾಗೂ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿರುವ ಕೆ.ಕೆ. ಪೂಣಚ್ಚ, ಭಾರತೀಯ ಹಾಕಿ ತಂಡದ ತರಬೇತುದಾರ ಹಾಗೂ ಮೆಲ್ಬೋರ್ನ್ ಕ್ಲಬ್ನ ಬಿ.ಜೆ.ಕಾರ್ಯಪ್ಪ, ಹಾಕಿ ಕೂರ್ಗ್ ಅಧ್ಯಕ್ಷ ಪಳಂಗಂಡ ಲವಕುಮಾರ್, ಕಾವೇರಿ ರಾಯಲ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ಅಧ್ಯಕ್ಷ ಮೊಳ್ಳೇರ ಸಾಧಾ ಅಪ್ಪಚ್ಚು ಹಾಗೂ ಕೈಗ್ ಗ್ರೂಪ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಧಿನ್ ಮಂದಣ್ಣ ಕೆ.ಎ.ಪಾಲ್ಗೊಳ್ಳಲಿದ್ದಾರೆ.