Kodagu

ಸುಂಟಿಕೊಪ್ಪದಲ್ಲಿ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ: ಕಾರು ಜಖಂ, ಪರಸ್ಪರ ದೂರು

admincoorgdaily

AI Image
ಸುಂಟಿಕೊಪ್ಪ; ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆದಿದ್ದು, ಹಲ್ಲೆಗೊಳಗಾದ ವ್ಯಕ್ತಿಯು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಪರಸ್ಪರ ಪೊಲೀಸ್ ದೂರು ದಾಖಲಾಗಿದೆ.

ಶ್ರೀದೇವಿ ನಿವಾಸಿ ಪುನೀತ್, ಕೊಡಗರಹಳ್ಳಿ ನಿವಾಸಿ ಅನೀಶ್ ಎಂಬವರುಗಳು ಗಿರಿಯಪ್ಪಮನೆ ನಿವಾಸಿ ನಿತಿನ್ ಎಂಬವರು ಮನೆಯಲ್ಲಿದ್ದ ಸಂದರ್ಭ ಏಕಾಏಕಿ ಮನೆಗೆ ನುಗ್ಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಲ್ಲದೆ ಪೋಷಕರು ಮತ್ತು ಮಕ್ಕಳ ಮೇಲೂ ಹಲ್ಲೆ ನಡೆಸಿ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರನ್ನು ಜಖಂಗೊಳಿಸಿದ್ದಾರೆ ಎಂದು ನಿತಿನ್ ಸಹೋದರಿ ನೀತಾ ದೂರು ನೀಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಕೊಡಗರಹಳ್ಳಿ ನಿವಾಸಿ ಅನೀಶ್ ಎಂಬವರ ಪತ್ನಿ ಅನುಷಾ ತಾನು ಮತ್ತು ಮಗ ಮನೆಯಲ್ಲಿದ್ದಾಗ ನಿತಿನ್ ಮನೆಗೆ ಬಂದು ಅಸಭ್ಯವಾಗಿ ವರ್ತಿಸಿ ತನ್ನ ಪತಿಗೆ ಜೀವಬೆದರಿಕೆ ಹಾಕಿದ್ದಾನೆ ಎಂದು ದೂರು ನೀಡಿದ್ದು, ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.