State News

ಮಾಣಿ ಬಳಿ ಭೀಕರ ರೋಡ್ ಅಪಘಾತ: ಮಡಿಕೇರಿ ಮೂಲದ ಮಹಿಳೆ ದುರ್ಮರಣ, ಮೂವರಿಗೆ ಗಂಭೀರ ಗಾಯ!

admincoorgdaily

ಮಾಣಿ ಬಳಿ ಭೀಕರ ರೋಡ್ ಅಪಘಾತ: ಮಡಿಕೇರಿ ಮೂಲದ ಮಹಿಳೆ ದುರ್ಮರಣ, ಮೂವರಿಗೆ ಗಂಭೀರ ಗಾಯ!
ವಿಟ್ಲ, ಸೆ. 28: ಮಾಣಿ ಸಮೀಪದ ಹಳೀರ ಫ್ಲೈ ಓವರ್ ಬಳಿ ಆಲ್ಟೋ ಕಾರು ಮತ್ತು ಟೆಂಪೋ ಪಿಕಪ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡು, ಓರ್ವ ಮಹಿಳೆ ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ನಡೆದಿದೆ.
ಮೃತ ಮಹಿಳೆಯನ್ನು ಮಡಿಕೇರಿ ನಿವಾಸಿ ನಫೀಸಾ (55) ಎಂದು ಗುರುತಿಸಲಾಗಿದೆ.

ಚಾಲಕ ಸೇರಿ 5 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ನಾಲ್ಕು ಮಹಿಳೆಯರು ಹಾಗೂ ಚಾಲಕ ಕಾರಿನಲ್ಲಿದ್ದರು. ಉಮ್ರಾ ತರಗತಿ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಗಾಯಗೊಂಡವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಪುತ್ತೂರು, ಮಡಿಕೇರಿ, ಮೈಸೂರು ರಸ್ತೆಗೆ ಪ್ರವೇಶ ಮಾಡಬೇಕಾದ ಹಳೀರದ ಸರ್ವಿಸ್ ರಸ್ತೆಯು ಗೊಂದಲಗಳಿಂದ ಕೂಡಿದ್ದು, ಹೆಚ್ಚು ಅಪಘಾತಗಳು ನಡೆಯಲು ಕಾರಣವಾಗುತ್ತಿದೆ. ಹೊರಗಿನಿಂದ ಬಂದವರಿಗೆ ಈ ಸರ್ವಿಸ್ ರಸ್ತೆಯು ಮಡಿಕೇರಿ-ಮೈಸೂರು ಹೆದ್ದಾರಿಗೆ ಪ್ರವೇಶ ರಸ್ತೆ ಎಂದು ಸರಿಯಾಗಿ ತಿಳಿಯದೇ ವಾಹನ ಚಾಲನೆಯಲ್ಲಿ ಗೊಂದಲ ಉಂಟಾಗುತ್ತಿರುವುದು ದಿನೇ ದಿನೇ ಸಾಮಾನ್ಯವಾಗಿದೆ. ಕಿರಿದಾದ ಪ್ರವೇಶ ರಸ್ತೆಯು ಸರಿಯಾಗಿ ಗೋಚರಿಸದೇ ಇರುವುದು ಮತ್ತು ಯಾವುದೇ ಸೂಚನಾ ಫಲಕ ಕೂಡಾ ಇಲ್ಲದೇ ಇರುವುದು ಹಲವಾರು ಗೊಂದಲಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.