Kodagu

ಮಳೆಗೆ ಮನೆ ಸಂಪೂರ್ಣ ನೆಲಸಮ

admincoorgdaily

ಮಳೆಗೆ ಮನೆ ಸಂಪೂರ್ಣ ನೆಲಸಮ
ಮಡಿಕೇರಿ ತಾ. ಅ.25: ಮಡಿಕೇರಿ ತಾಲೂಕು ಸಂಪಾಜೆ ಹೋಬಳಿ ಪಿ.ಪೆರಾಜೆ ಗ್ರಾಮದಲ್ಲಿ ವಾಸವಿರುವ ಪದ್ಮಯ್ಯ ಚಾಮಕಜೆ ಎಂಬುವರ ವಾಸದ ಮನೆ ಹೆಚ್ಚಿನ ಮಳೆಯಿಂದಾಗಿ ಸಂಪೂರ್ಣ ಹಾನಿಯಾಗಿದೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ನಾಶವಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.