Kodagu

ಕರಡಿಗೋಡಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಹಾನಿ - ಸಂತ್ರಸ್ತ ಕುಟುಂಬಕ್ಕೆ ಎ.ಎಸ್.ಪೊನ್ನಣ್ಣ ಭೇಟಿ, ಪರಿಹಾರ ಭರವಸೆ

admincoorgdaily

ಕರಡಿಗೋಡಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಹಾನಿ - ಸಂತ್ರಸ್ತ ಕುಟುಂಬಕ್ಕೆ ಎ.ಎಸ್.ಪೊನ್ನಣ್ಣ ಭೇಟಿ, ಪರಿಹಾರ ಭರವಸೆ
ಸಿದ್ದಾಪುರ; ಕರಡಿಗೋಡು ಭಾಗದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹಾನಿಗೊಳಗಾದ ಮನೆಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ರವರು ಭೇಟಿ ನೀಡಿದರು.

ಮನೆಯ ಮಾಲೀಕ ಷಣ್ಮುಗಂ ಅವರಿಗೆ ಧೈರ್ಯ ತುಂಬಿದ ಶಾಸಕರು, ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡರು. ಸಂಕಷ್ಟದಲ್ಲಿರುವ ಷಣ್ಮುಗಂ ಕುಟುಂಬಕ್ಕೆ ಅಗತ್ಯ ಸಾಮಗ್ರಿಗಳ ಕಿಟ್ ವಿತರಿಸಿ, ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಿದ್ದಾಪುರ ವಲಯ ಅಧ್ಯಕ್ಷ ಪ್ರತೀಶ್, ಮುಖಂಡರಾದ ಸೂರಜ್ ಹೊಸೂರು, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಮಾಜಿ ಪಂ.ಸದಸ್ಯ ಕರುಪಯ್ಯ, ಮಿಲನ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.