Kodagu

ಕುಶಾಲನಗರದ ಬೈಕ್ ಶೋರೂಮಿನ ನಾಮಪಲಕದಲ್ಲಿ ಕನ್ನಡ ಕಡೆಗಣನೆ:- ಕ.ರ.ವೇ.ಆಕ್ರೋಶ , ದಂಡ ಪಾವತಿ

admincoorgdaily

ಕುಶಾಲನಗರದ ಬೈಕ್ ಶೋರೂಮಿನ ನಾಮಪಲಕದಲ್ಲಿ ಕನ್ನಡ ಕಡೆಗಣನೆ:- ಕ.ರ.ವೇ.ಆಕ್ರೋಶ , ದಂಡ ಪಾವತಿ
ಕುಶಾಲನಗರ : ಮಡಿಕೇರಿ ಹೆದ್ದಾರಿಯ ಬೈಚನಹಳ್ಳಿಯ ಸಮೀಪದಲ್ಲಿರುವ ರಾಯಲ್ ಎನ್ ಫೀಲ್ಡ್ ಬೈಕ್ ಶೋರೂಮಿನ ನಾಮಫಲಕದಲ್ಲಿ ಕೇವಲ ಕನ್ನಡ ಶೇಕಡ ೫% ಹಾಗೂ ಆಂಗ್ಲ ಭಾಷೆ ೯೫% ಭಾಗದಷ್ಟು ಇರುವುದನ್ನು ಅರಿತ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಶೋರುಮಿನ ಸಂಬಂಧಪಟ್ಟವರನ್ನು ವಿಚಾರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಂತರ ಪುರಸಭೆಯ ಮುಖ್ಯ ಅಧಿಕಾರಿಗಳನ್ನು ಸ್ಥಳಕ್ಕೆ   ಭೇಟಿ ನೀಡುವಂತೆ ಒತ್ತಾಯಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಧಿಕಾರಿಯವರು ಮಾಡಿದ ತಪ್ಪಿಗೆ 2000ರೂ ದಂಡವನ್ನು ಹಾಕಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇದೇ ರೀತಿ ಆಂಗ್ಲ ಭಾಷೆಯ ನಾಮಫಲಕವನ್ನು ಹಾಕಿದಲ್ಲಿ ದೊಡ್ಡ ಮೊತ್ತದ ದಂಡವನ್ನು ಹಾಕುವುದಾಗಿ ಪುರಸಭೆ ಅಧಿಕಾರಿಗಳು  ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಕ.ರವೇ.ಶಿವರಾಮೆಗೌಡರ ಬಣದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಕೆ.ಚಂದ್ರು, ಪುಟ್ಟಮ್ಮ  ಮಹಿಳಾ ತಾಲ್ಲೂಕು ಗೌರವಾಧ್ಯಕ್ಷರು, 
ಪುಟ್ಟಸ್ವಾಮಿ  ತಾಲ್ಲೂಕು ಅಧ್ಯಕ್ಷರು, ರಂಗಸ್ವಾಮಿ  ತಾಲ್ಲೂಕು ಉಪಾಧ್ಯಕ್ಷರು, 
ನಾಗರಾಜ್ ಜಿಲ್ಲಾ ಗೌರವ ಅಧ್ಯಕ್ಷರು, ಸದಸ್ಯ
ಕಾರ್ತಿಕ್ ಮುಂತಾದವರು ಭಾಗವಹಿಸಿದ್ದರು.