Kodagu

ಅಕ್ರಮ ಅಡುಗೆ ಅನಿಲ ಸಿಲಿಂಡರ್ ದಾಸ್ತಾನು ಪತ್ತೆ; ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ, 39 ಸಿಲಿಂಡರ್ ವಶ

admincoorgdaily

ಅಕ್ರಮ ಅಡುಗೆ ಅನಿಲ ಸಿಲಿಂಡರ್ ದಾಸ್ತಾನು ಪತ್ತೆ; ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ, 39 ಸಿಲಿಂಡರ್ ವಶ
ಸೋಮವಾರಪೇಟೆ:-
 ತಾಲೂಕಿನ ಶನಿವಾರಸಂತೆ ಸಮೀಪದ ಹಾರೆಹೊಸೂರು ಗ್ರಾಮದ ಅಂಗಡಿಯಲ್ಲಿ ಅಕ್ರಮವಾಗಿ ಸಿಲಿಂಡರ್ ಇರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ತಹಸೀಲ್ದಾರ್ ಕೃಷ್ಣಮೂರ್ತಿ ,ಆಹಾರ ನಿರೀಕ್ಷಕಿ ಸ್ವಾತಿ ,ಶನಿವಾರಸಂತೆ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಧಾಳಿ ನಡೆಸಿ ಒಟ್ಟು 39 ಸಿಲಿಂಡರ್ ಗಳನ್ನು ವಶಪಡಿಸಿಕೊಂಡು ಮೊಖದಮ್ಮೆ ದಾಖಲು ಮಾಡಿದ್ದಾರೆ.

ಹಾರೆ ಹೊಸೂರು ಗ್ರಾಮದ ವಿಜಯ ಎಂಬುವರ ದಿನಸಿ ಅಂಗಡಿ ಪಕ್ಕದ ಗೋಡೌನ್ ನಲ್ಲಿ ಅನಧಿಕೃತವಾಗಿ ಸಿಲಿಂಡರ್ ಗಳನ್ನು ಸಂಗ್ರಹಿರುವುದಲ್ಲದೆ,ಅನದಿಕೃತ ವಾಗಿ ಮಾರಾಟ ಮಾಡುತ್ತಿದ್ದಾರೆಂದು ತಹಸೀಲ್ದಾರ್ ಕೃಷ್ಣಮೂರ್ತಿ ಯವರಿಗೆ ಬಂದ ಮಾಹಿತಿಯ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನ ದಿಢೀರ್ ದಾಳಿ ನಡೆಸಿದಾಗ ಸ್ಥಳದಲ್ಲಿ ಹೆಚ್.ಪಿ ಕಂಪೆನಿಯ ಗ್ಯಾಸ್ ತುಂಬಿದ್ದ 13 ಸಿಲಿಂಡರ್,ಸೇರಿದಂತೆ ವಿವಿಧ ಕಂಪೆನಿಗಳ ಕಾಲಿ ಸಿಲಿಂಡರ್ ಸೇರಿದಂತೆ ಒಟ್ಟು 39 ಸಿಲಿಂಡರ್ ಸಿಕ್ಕಿದ್ದು ಅಧಿಕಾರಿಗಳು ಸ್ಥಳೀಯರ ಸಾಕ್ಷ್ಯದೊಂದಿಗೆ ಮಹಜರು ನಡೆಸಿ ಸಿಲಿಂಡರ್ ವಶಪಡಿಸಿಕೊಂಡು ಸೋಮವಾರಪೇಟೆ ಗಜಾನನ ಗ್ಯಾಸ್ ಏಜೆನ್ಸಿ ಗೋಡೌನ್ ಗೆ ರವಾನಿಸಿ ರಕ್ಷಿಸಿಟಿದ್ದಾರೆ.

ಪ್ರಭಾರ ಆಹಾರ ನಿರೀಕ್ಷಕಿ ಸ್ವಾತಿ ನೀಡಿದ ದೂರಿನ ಹಿನ್ನಲೆಯಲ್ಲಿ ಶನಿವಾರಸಂತೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.