Kodagu

ಅಕ್ರಮ ಗಾಂಜಾ ಸಾಗಾಟ : ಓರ್ವ ಆರೋಪಿ ಅಂದರ್

admincoorgdaily

ಅಕ್ರಮ ಗಾಂಜಾ ಸಾಗಾಟ :  ಓರ್ವ ಆರೋಪಿ ಅಂದರ್
ಶನಿವಾರಸಂತೆ;ದಿನಾಂಕ: 24-10-2026 ರಂದು ಸಂಜೆ 5 ಗಂಟೆಗೆ ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಚಿಕ್ಕಕೊಳತ್ತೂರು ಬಸ್ ನಿಲ್ದಾಣದ ಬಳಿ ದಾಳಿ ನಡೆಸಿರುವ ಪೊಲೀಸರು  ಅಸ್ಸಾಂ ಮೂಲದ  ವ್ಯಕ್ತಿಯು ಅಕ್ರಮವಾಗಿ ಗಾಂಜಾವನ್ನು ಬ್ಯಾಗಿನಲ್ಲಿ ಸಾಗಾಟ ಮಾಡುತ್ತಿದ್ದುದು ಕಂಡುಬಂದ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು NDPS ಕಾಯ್ದೆಅಡಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಯನ್ನು ದಸ್ತಗಿರಿ ಮಾಡಿ  ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.