Kodagu

ಕುಶಾಲನಗರದಲ್ಲಿ ಅಕ್ರಮ ಮರ ಸಾಗಾಟ: 5 ಲಾರಿ ವಶ, ರೂ.2.97 ಲಕ್ಷ ದಂಡ

admincoorgdaily

ಕುಶಾಲನಗರದಲ್ಲಿ ಅಕ್ರಮ ಮರ ಸಾಗಾಟ: 5 ಲಾರಿ ವಶ, ರೂ.2.97 ಲಕ್ಷ ದಂಡ
ಕುಶಾಲನಗರ:ಆರ್.ಸಿ ನಿಯಮ ಉಲ್ಲಂಘಿಸಿ, ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯದಿಂದ ಚಾಲನೆ ಮಾಡುತ್ತಾ ನಿಗದಿತ ಎತ್ತರ ಮತ್ತು ಉದ್ದಳತೆಯನ್ನು ಮೀರಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ 5 ಲಾರಿಗಳನ್ನು ಕುಶಾಲನಗರ ಟ್ರಾಫಿಕ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೊಡಗು ಜಿಲ್ಲಾ ಪೊಲೀಸ್ ವ್ಯಾಪ್ತಿಯ ಕುಶಾಲನಗರ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ವಶಪಡಿಸಿಕೊಂಡ ಐದು ಲಾರಿಗಳ ವಿರುದ್ಧ ನಿಯಮಾನುಸಾರ ಪ್ರಾದೇಶಿಕ ಸಾರಿಗೆ ಕಚೇರಿ (RTO) ಮೂಲಕ ಕ್ರಮ ಕೈಗೊಂಡು ಒಟ್ಟು 
ರೂ. 2,97,000/-ದಂಡ ವಿಧಿಸಲಾಗಿದೆ.