Kodagu

2030ಕ್ಕೆ ಭಾರತದಲ್ಲಿ ಮಲೇರಿಯಾ ಮುಕ್ತ, ಕೊಡಗು ಜಿಲ್ಲೆಗೆ ಕೇಂದ್ರ ತನಿಖಾ ತಂಡ ಭೇಟಿ

admincoorgdaily

2030ಕ್ಕೆ ಭಾರತದಲ್ಲಿ ಮಲೇರಿಯಾ ಮುಕ್ತ, ಕೊಡಗು ಜಿಲ್ಲೆಗೆ ಕೇಂದ್ರ ತನಿಖಾ ತಂಡ ಭೇಟಿ
ಮಡಿಕೇರಿ;
2030ಕ್ಕೆ ದೇಶದಲ್ಲಿ ಮಲೇರಿಯಾ ರೋಗ ಪ್ರಕರಣವನ್ನು  ಕೊನೆಗಾಣಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು ದೇಶಾದ್ಯಂತ ಆರೋಗ್ಯ ಸಂಸ್ಥೆಗಳಲ್ಲಿ ರೋಗ ಪ್ರಕರಣಗಳ ಚಿಕಿತ್ಸೆ ಅನುಸರಣೆ, ದಾಖಲಾತಿ ನಿರ್ವಹಣೆ ಪರಿಶೀಲಿಸಲು ಕೇಂದ್ರ ಪರಿಶೀಲನ ತಂಡ ಕೊಡಗು ಜಿಲ್ಲೆಗೆ ಭೇಟಿ ನೀಡಿ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ  ಡಾ. ಕೆ.ಎಂ. ಸತೀಶ್ ಕುಮಾರ್,ತಿಳಿಸಿದರು.
ಕೊಡಗು ಜಿಲ್ಲೆಗೆ ಕಳೆದ 3 ದಿನಗಳಿಂದ  ಸಬ್ ನ್ಯಾಷನಲ್ ಮಲೇರಿಯಾ ಎಲಿಮಿನೇಷನ್ ವ್ಯಾಲಿಡೇಶನ್ ( SNMEV) ರಾಷ್ಟ್ರೀಯ ತಂಡ  ಸೋಮವಾರಪೇಟೆ ತಾಲ್ಲೂಕು ಆಸ್ಪತ್ರೆ, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ,  ಪ್ರಾಥಮಿಕ ಆರೋಗ್ಯ ಕೇಂದ್ರ ಆಲೂರು ಸಿದ್ದಾಪುರ, ಉಪಕೇಂದ್ರ ಸುಂಟಿಕೊಪ್ಪ,  ಮತ್ತು ಮಡಿಕೇರಿ ತಾಲೂಕಿನ ನಗರ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆ ಭೇಟಿ ನೀಡಿ  ಮಲೇರಿಯಾ ಮುಕ್ತ ಮಾಡಲು ಕಳೆದ 5 ವರ್ಷಗಳಿಂದ ಅನುಸರಿಸಿರುವ ದಾಖಲಾತಿ ನಿರ್ವಹಣೆ ಮತ್ತು ರೋಗಿಗಳ ಚಿಕಿತ್ಸೆ ಅನುಸರಣೆ ಪರಿಶೀಲನೆ ನಡೆಸಿದರು. 
ಈ ತಂಡದ ನೇತೃತ್ವವನ್ನು ದೆಹಲಿಯ ಡಾಕ್ಟರ್ ಕಲ್ಪನಾ ಬರುವ ರವರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು. 

ಇವರೊಂದಿಗೆ ಕೇಂದ್ರ ತಂಡದ ಡಾ.ಆರ್.ತೇನಾಂಬಿಗೈ, ಡಾ.ಬಿಜೀತ್ ಬಿಸ್ವಾ, ಡಾ.ಶ್ಯಾಮ್ ಬಂದು ರಾತ್ ಪರಿಶೀಲನೆ ನಡೆಸಿದರು.
ಈ ವೇಳೆ ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳಾದ ಡಾ. ಶ್ರೀನಿವಾಸ್ B.L.  ಸೋಮವಾರಪೇಟೆ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಇಂದೂಧರ್, ಮಡಿಕೇರಿ ತಾಲ್ಲೂಕು ಆರೋಗ್ಯಾದಿಕಾರಿ ಡಾ.ಸುನಿಲ್, ಜಿಲ್ಲಾ ಎಂಟಮಾಲಿಜಿಸ್ಟ್ ಮಂಜುನಾಥ್,  ಜಿಲ್ಲೆಯ NVBDCP ತಂಡ ಹಾಗೂ ಎಲ್ಲಾ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಸಿಬ್ಬಂದಿಯವರು ಪರಿಶೀಲನೆ  ವೇಳೆಯಲ್ಲಿ ಹಾಜರಿದ್ದರು.

ಜಿಲ್ಲೆಯಲ್ಲಿ ಉತ್ತಮ ನಿರ್ವಹಣೆ ಮಾಡಲಾಗಿದ್ದು ಇತರೆ ಕೆಲವು ಸಣ್ಣಪುಟ್ಟ ನಿರ್ವಹಣೆ ಸರಿಪಡಿಸಿಕೊಳ್ಳಲು ಸಲಹೆ ನೀಡಿದರು.
ಕೊನೆಯಲ್ಲಿ ಪರಿಶೀಲನ ತಂಡದವರಿಗೆ ಸರ್ವೇಕ್ಷಣಾ ಘಟಕದಿಂದ ಸನ್ಮಾನಿಸಿ ಗೌರವಿಸಲಾಯಿತು.