ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆಯ ಬಗ್ಗೆ ಮಾಹಿತಿ
admincoorgdaily

ಮನೆಯ ಯಜಮಾನಿಗೆ ಮಾಸಿಕ ಎರಡು ಸಾವಿರ ರೂ ನೀಡುವ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ಸದ್ಯದಲ್ಲೇ ನಡೆಯಲಿದೆ.
ಆದರೆ ಇದರ ಬಗ್ಗೆ ಯಾರೂ ಗೊಂದಲಕ್ಕೀಡಾಗುವ ಅವಶ್ಯಕತೆ ಇಲ್ಲ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮರುಪರಿಶೀಲನೆ ನಡೆಸಲಿದೆ.
ನಿಮ್ಮ ದಾಖಲೆಗಳನ್ನು ಪರಿಶೀಲನೆ ನಡೆಸಲು ಮನೆಯ ಬಾಗಿಲ ಬಳಿಗೆ ಬರಲಿದೆ.
ಯಾವ ದಾಖಲೆಗಳು ಬೇಕು ಎಂಬುದನ್ನು ಇದುವರೆಗೆ ಅಧಿಕೃತವಾಗಿ ಸರ್ಕಾರ ಘೋಷಣೆ ಮಾಡಿಲ್ಲ.
ಎಸ್ಐಆರ್ ಅಂತಿಮ ಪಟ್ಟಿ ಪ್ರಕಟಗೊಂಡ ಬಳಿಕ ಈ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ.
ಆತಂಕದಿಂದ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ಹಣ ಕಳೆದುಕೊಳ್ಳಬೇಡಿ..
ಮರುಪರಿಶೀಲನೆ ಸಂದರ್ಭದಲ್ಲಿ ನಿಮ್ಮ ಮನೆಯ ಬಾಗಿಲಿಗೆ ಅಂಗನವಾಡಿ ಕಾರ್ಯಕರ್ತೆಯರು ಬಂದು ದಾಖಲೆ ಪರಿಶೀಲನೆ ಮಾಡುತ್ತಾರೆ.
ದಿನಾಂಕ ಇದುವರೆಗೆ ಘೋಷಣೆ ಮಾಡಿಲ್ಲ.