Kodagu

ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಅಮಾನವೀಯ ಕೃತ್ಯ -ಅಪಘಾತದಲ್ಲಿ ಮೃತನ ಚಿನ್ನ ದೋಚಿದ ದುಷ್ಕರ್ಮಿಗಳು

admincoorgdaily

ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಅಮಾನವೀಯ ಕೃತ್ಯ -ಅಪಘಾತದಲ್ಲಿ ಮೃತನ ಚಿನ್ನ ದೋಚಿದ ದುಷ್ಕರ್ಮಿಗಳು
ಕುಶಾಲನಗರ; ಆನೆ ಕಾಡು ಬಳಿ  ನಡೆದ ಅಪಘಾತದಲ್ಲಿ ಮೃತಪಟ್ಟ ರತನ್ ಉಣ್ಣಿಯವರ ಶರೀರದಲ್ಲಿದ್ದ ಆಭರಣಗಳನ್ನು ದೋಚಿರುವ ಪ್ರಕರಣ ಕುರಿತು ಆರೋಪಿಗಳನ್ನು  ಕೂಡಲೆ ಬಂಧಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.

ಸೆ.20 ರಂದು ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರತನ್ ಉಣ್ಣಿಯವರನ್ನು ನಗರದ  ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ ಸಂದರ್ಭದಲ್ಲಿ ಇ.ಸಿ.ಜಿ ತೆಗೆಯಲು ಕೊಂಡೊಯ್ಯುವವರೆಗೂ ಅವರ ಶರೀರದಲ್ಲಿ ಚಿನ್ನದ ಆಭರಣಗಳು ಇರುವುದನ್ನು ಮೃತಪಟ್ಟ ರತನ್ ಉಣ್ಣಿಯವರ ಸ್ನೇಹಿತರು ಗಮನಿಸಿದ್ದು, ತದನಂತರ ಆಭರಣಗಳನ್ನು ಅಲ್ಲೇ ತೆಗೆದಿರಿಸಿದ್ದಾರೋ ಅಥವಾ ಶವಾಗಾರದಲ್ಲಿ ನಾಪತ್ತೆಯಾಗಿದೆಯೋ ಎಂಬ ಅನುಮಾನಗಳು ಇರುವ ಹಿನ್ನೆಲೆಯಲ್ಲಿ ಸದರಿ ಪ್ರಕರಣದ ಕುರಿತು ಇಂದು ಕುಶಾಲನಗರದ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಯಿತು.

 ಸಂದರ್ಭದಲ್ಲಿ  ಕರ್ನಾಟಕ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾ ಉಪಾಧ್ಯಕ್ಷರಾದ ಕೆ.ಆರ್.ರಾಜೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಗೋವಿಂದ್ ರಾಜ್ ದಾಸ್,
ಕುಶಾಲನಗರದ ತಾಲ್ಲೂಕು ಘಟಕದ ಅಧ್ಯಕ್ಷರಾದ ಬಿ.ಜೆ.ಅಣ್ಣಯ್ಯ,ತಾಲ್ಲೂಕು ಉಪಾಧ್ಯಕ್ಷರಾದ ಎಸ್.ಎಸ್. ಫಯಾಜ್ ಉದ್ದೀನ್ , ಮೃತಪಟ್ಟ ರತನ್ ಉಣ್ಣಿಯವರ ಸಂಬಂಧಿಕರುಗಳು, ಸ್ನೇಹಿತರಾದ ಪ್ರಶಾಂತ್ ವಿ. ಯೊಂದಿಗೆ ಇನ್ನು ಹಲವರು ಉಪಸ್ಥಿತರಿದ್ದರು.