Kodagu

ಕೂಡಿಗೆಯಲ್ಲಿ ಅಂತರರಾಜ್ಯ ಮುಕ್ತ ವಾಲಿಬಾಲ್ ಪಂದ್ಯಾವಳಿ; ಶಾಸಕ ಮಂತರ್ ಗೌಡ ನೇತೃತ್ವದಲ್ಲಿ ಪೂರ್ವಭಾವಿ ಸಭೆ

admincoorgdaily

ಕೂಡಿಗೆಯಲ್ಲಿ ಅಂತರರಾಜ್ಯ ಮುಕ್ತ ವಾಲಿಬಾಲ್ ಪಂದ್ಯಾವಳಿ; ಶಾಸಕ ಮಂತರ್ ಗೌಡ ನೇತೃತ್ವದಲ್ಲಿ ಪೂರ್ವಭಾವಿ ಸಭೆ
ಕೂಡಿಗೆ:ಕೂಡಿಗೆಯ ಯೂತ್ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ಡಿಸೆಂಬರ್ 12 ಶನಿವಾರ ಮತ್ತು ಡಿಸೆಂಬರ್ 13 ಭಾನುವಾರ ಎರಡು ದಿನ ಹಗಲು ಮತ್ತು ರಾತ್ರಿ ಅಂತರರಾಜ್ಯ ಮುಕ್ತ ವಾಲಿಬಾಲ್ ಪಂದ್ಯಾವಳಿ ನಡೆಯಲಿದ್ದು, ಈ ಸಂಬಂಧ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರ ನೇತೃತ್ವದಲ್ಲಿ ಮಂಗಳವಾರ ಪೂರ್ವಭಾವಿ ಸಭೆಯು ಕೂಡಿಗೆಯಲ್ಲಿ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ಡಾ.ಮಂತರ್ ಗೌಡ, ಎಲ್ಲಾ ಧರ್ಮವನ್ನು ಒಂದಾಗಿಸುವ ಸಾಮರ್ಥ್ಯ ಕ್ರೀಡೆಗಿದೆ. ಕೂಡಿಗೆಯಲ್ಲಿ ದೊಡ್ಡ ಮಟ್ಟದ ಪಂದ್ಯಾವಳಿ ನಡೆಸುತ್ತಿರುವ ಯೂತ್ ಫ್ರೆಂಡ್ಸ್ ಅಸೋಸಿಯೇಷನ್ ಅವರಿಗೆ ಅಭಿನಂದನೆಗಳು ಹಾಗೂ ಶುಭಾಶಯಗಳು. ಪಂದ್ಯಾವಳಿಗೆ ಪೂರ್ಣಪ್ರಮಾಣದ ಸಹಕಾರ ನೀಡುವುದಾಗಿ ತಿಳಿಸಿದರು.

ಕುಶಾಲನಗರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷರಾದ ವಿ.ಪಿ.ಶಶಿಧರ್ ಮಾತನಾಡಿ, ಕ್ರೀಡೆಯಿಂದ ಸಾಮರಸ್ಯ ಮೂಡಲಿದೆ. ಯೂತ್ ಫ್ರೆಂಡ್ಸ್ ಅಸೋಸಿಯೇಷನ್ ನ ಅಂತರರಾಜ್ಯ ಪಂದ್ಯಾವಳಿಯು ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು.

ಈ ಸಂದರ್ಭ ಯೂತ್ ಫ್ರೆಂಡ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಕೂಡಿಗೆಯ ಪೀಟರ್, ಉಪಾಧ್ಯಕ್ಷರಾದ ಟಿ.ಪಿ.ಹಮೀದ್, ಕಾರ್ಯದರ್ಶಿ ಶಿವಕುಮಾರ್, ಖಜಾಂಜಿ ಕೆ.ವಿ.ಸನ್ನಿ, ಹಾಗೂ ಎಸ್.ಆರ್.ಅರುಣ್ ರಾವ್, ಫಾದರ್ ಚಾರ್ಲ್ಸ್ ನರೋನ, ಯೂತ್ ಫ್ರೆಂಡ್ಸ್ ಅಸೋಸಿಯೇಷನ್ ಸದಸ್ಯರು ಹಾಗೂ ಕೂಡಿಗೆ ಸುತ್ತಮುತ್ತಲಿನ ಗ್ರಾಮದ ಪ್ರಮುಖರು ಇದ್ದರು.