ಹಾಕತ್ತೂರು ಜಮಾಅತ್ ಮಸೀದಿ ಸಮುದಾಯ ಭವನದಲ್ಲಿ 10 ಲಕ್ಷ ವೆಚ್ಚದ ಇಂಟರ್‌ಲಾಕ್ ಕಾಮಗಾರಿ ಉದ್ಘಾಟನೆ
admincoorgdaily

ಮಡಿಕೇರಿ:ತಾಲ್ಲೂಕಿನ ಹಾಕತ್ತೂರು (ಬಿಳಿಗೇರಿ) ಭಾಗದಲ್ಲಿರುವ ಜಮಾಅತ್ ಮಸೀದಿಯ ಸಮುದಾಯ ಭವನದ ಆವರಣದಲ್ಲಿ ರೂ. 10 ಲಕ್ಷ ವೆಚ್ಚದಲ್ಲಿ ನೂತನವಾಗಿ ಕೈಗೆತ್ತಿಕೊಳ್ಳಲಾದ ಇಂಟರ್‌ಲಾಕ್ ಅಳವಡಿಕೆ ಕಾಮಗಾರಿಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಅಧ್ಯಕ್ಷರಾದ ಸೌಕಾತ್ ಆಲೀ, ಮಾಜಿ ಬ್ಲಾಕ್ ಅಧ್ಯಕ್ಷರಾದ ಇಸ್ಮಾಯಿಲ್, ಬಿಳಿಗೇರಿ ಬೂತ್ ಅಧ್ಯಕ್ಷರಾದ ಮಹಮದ್ ಇಲಿಯಾಜ್, ಖಲೀದ್ ಪಿ. ಕೆ, ಅಲ್ತಾಫ್, ಜಮಾಯತ್ ಅಧ್ಯಕ್ಷರು ಅಬ್ದುಲ್ಲಾ ಪಿ. ಎ, ಜಮಾಯತ್ ಸೆಕ್ರೆಟರಿ ಫಾಝಲ್ ಕೆ. ಎ, ಪಕ್ಷದ ಮುಖಂಡರಾದ ಅಜಿಜ್ ಸಿ. ಎಂ, ಮಹಮದ್ ಷರೀಫ್ ಬಿ. ಎ, ಶಾಹಿಲ್, ಮುಖಂಡರಾದ ಖಾಸಿಂ, ಆಸೀಫ್, ಪಕ್ಷದ ಕಾರ್ಯಕರ್ತರಾದ ಆಲಿ, ಉಸೈನಾರ್, ನಾಸಿರ್ ಮತ್ತಿತರರು ಉಪಸ್ಥಿತರಿದ್ದರು.