ಕುಶಾಲನಗರದಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಮತ್ತು ನವ ಸಾಕ್ಷರರಿಗೆ ಸನ್ಮಾನ
admincoorgdaily

ಮಡಿಕೇರಿ ಸೆ.08:-ಕುಶಾಲನಗರದ ಪಿ.ಎಂ.ಶ್ರೀ ಶಾಲೆಯಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ನವ ಸಾಕ್ಷರರಿಗೆ ಸನ್ಮಾನ ಕಾರ್ಯಕ್ರಮವು ಮಂಗಳವಾರ ನಡೆಯಿತು.
ಜಿಲ್ಲಾ ಸಾಕ್ಷರತಾ ನೋಡಲ್ ಅಧಿಕಾರಿ ಡಾ.ಹೇಮಂತ್ ರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಕೊಡಗು ಜಿಲ್ಲೆಯು ಶೇ.93 ಸಾಕ್ಷರತೆ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಹಾಗೂ ಕೆಲವೇ ದಿನಗಳಲ್ಲಿ ಕೊಡಗು ಜಿಲ್ಲೆಯನ್ನು 'ಸಂಪೂರ್ಣ ಸಾಕ್ಷರತಾ ಜಿಲ್ಲೆ' ಎಂದು ಘೋಷಿಸಲಾಗುವುದು ಎಂದರು.
ಡಯಟ್ ಉಪ ನಿರ್ದೇಶಕರು(ಅಭಿವೃದ್ಧಿ) ರಾಮ ಚಂದ್ರೇರಾಜೇ ಅರಸ್ ಅವರು ಶಾಲೆಯಲ್ಲಿ ಪಿ.ಎಂಶ್ರೀ ದ್ವಿಭಾಷಾ ಚಟುವಟಿಕೆಗಳ ಕೊಠಡಿ ಉದ್ಘಾಟಿಸಿ ಮಾತನಾಡಿ, ಬಹಳ ದಿನಗಳಿಂದ ಈ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹಶಿಕ್ಷಕರ ಪರಿಶ್ರಮದಿಂದ ಕೊಠಡಿ ನಿರ್ಮಾಣವಾಗಿದೆ ಎಂದರು.
15 ವರ್ಷ ಪೂರ್ಣಗೊಂಡ ಅಕ್ಷರಸ್ಥರಲ್ಲದವರು ಮುಖ್ಯವಾಹಿನಿಗೆ ಬರಬೇಕೆಂಬುದೇ ಮುಖ್ಯ ಆಶಯವಾಗಿದೆ. ಈ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಬೇಕಾದರೆ ಬಿ.ಆರ್.ಸಿ, ಬಿ.ಆರ್.ಪಿ ಹಾಗೂ ಸಿಆರ್‍ಪಿ ಗಳ ಪರಿಶ್ರಮ ಶ್ಲಾಘಿಸಿದರು.
ನವಸಾಕ್ಷರರು ಕೇವಲ ಸಹಿ ಮಾಡಲು ಕಲಿತರೆ ಸಾಲದು. ದೇಶದ ಅಭಿವೃದ್ಧಿಗೆ ನೆರವಾಗುವ ಶಿಕ್ಷಣ ಪಡೆಯಬೇಕು ಎಂದು ಸಲಹೆ ಮಾಡಿದರು.
ಸಾಕ್ಷರತರು ಸಾಧನೆ ಮಾಡುವುದರ ಜೊತೆಗೆ ಅವರನ್ನು ಒಂದೆಡೆ ಸೇರಿಸಿ ಅವರನ್ನು ಮುಖ್ಯವಾಹಿನಿಗೆ ತರುವುದೇ ಒಂದು ದೊಡ್ಡ ಸಾಹಸ ಎಂದು ಅಭಿಪ್ರಾಪಟ್ಟರು. ‘ಜನರು ಸಾಕ್ಷರತರಾಗಬೇಕು, ಬಾಳಿಗೆ ಬೆಳಕಾಗಬೇಕು ಎಂದು ತಿಳಿಸಿದರು.
ಸಾಕ್ಷರತರ ಪಠ್ಯಪುಸ್ತಕ ಬಾಳಿಗೆ ಬೆಳಕು ಮತ್ತು ಸವಿ ಬರಹ ಎಂಬ ಎರಡು ಪುಸ್ತಕಗಳನ್ನು ಹೊಂದಿರುತ್ತದೆ. ಕರ್ನಾಟಕದ ಸಾಕ್ಷರತೆ ಶೇ.54 ರಿಂದ ಪ್ರಾರಂಭವಾಗಿ ಈಗ ಶೇ.75 ಕ್ಕೆ ತಲುಪಿದ್ದೇವೆ. ಅದರಲ್ಲಿ ಕೊಡಗು ಶೇ.93 ರಷ್ಟು ಸಾಧಿಸಿದ್ದೇವೆ ಎಂದು ಅವರು ತಿಳಿಸಿದರು.
ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಅವರು ಮಾತನಾಡಿ ಜರ್ಮನಿ, ಅಮೆರಿಕ, ಇಂಗ್ಲೆಂಡ್ ದೇಶಗಳಲ್ಲಿ ನೂರಕ್ಕೆ ನೂರರಷ್ಟು ಸಾಕ್ಷರತೆ ಸಾಧಿಸಿದ್ದಾರೆ. ಸಾಕ್ಷರತೆ ಸಾಧಿಸಿರುವ ಈ ಎಲ್ಲಾ ದೇಶಗಳಲ್ಲಿ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ ಎಂದು ತಿಳಿಸಿದರು.
1988 ರಲ್ಲಿ ಮೊಟ್ಟ ಮೊದಲಿಗೆ ಸಾಕ್ಷರತೆ ಕಾರ್ಯಕ್ರಮ ಪ್ರಾರಂಭವಾಯಿತು. ಹತ್ತು ಹಲವಾರು ದೇಶಗಳ ಸಾಕ್ಷರತಾ ಪ್ರಮಾಣ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಸಹಾಯಕರಾದ ರವಿಶಂಕರ್ ಅವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮೂರು ತಾಲ್ಲೂಕುಗಳ ನವ ಸಾಕ್ಷರತರಿಗೆ ಸನ್ಮಾನಿಸಲಾಯಿತು.
ವಿಭಾಗ ಮಟ್ಟದಲ್ಲಿ ಅಧಿಕಾರಿಗಳ ಸಭೆಯಲ್ಲಿ ನಂಜರಾಯಪಟ್ಟಣ ಕ್ಲಸ್ಟರ್‍ನ ನೆಲ್ಲಿಹುದಿಕೇರಿ ಪ್ರಧಾನ ಮುಖ್ಯ ಶಿಕ್ಷಕರಾದ ಆಶಾ ಅವರನ್ನು ಪ್ರಶಂಸಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಹೇಶ್ ಅವರು ಮಾತನಾಡಿ ಯೂನಿಸೆಪ್‍ನ 14ನೇ ಮಹಾಸಭೆಯಲ್ಲಿ ದೇಶ ಸಾಕ್ಷರತೆ ಸಾಧಿಸುವುದು ಅತಿಮುಖ್ಯ ಎಂದು ಒತ್ತಿ ಹೇಳಲಾಗಿದೆ ಎಂದರು.
ಸಾಕ್ಷರತೆ ಪ್ರತಿಯೊಬ್ಬರ ಹಕ್ಕು. ಶಿಕ್ಷಣ ಪ್ರತಿಯೊಬ್ಬರ ಶಕ್ತಿ, ಆದ್ದರಿಂದ ದೇಶ ಅಭಿವೃದ್ಧಿ ಸಾಧಿಸಬೇಕಾದರೆ ಸಾಕ್ಷರತೆ ಸಾಧಿಸಬೇಕು ಎಂದು ತಿಳಿಸಿದರು.
ಶಿಕ್ಷಣಾಧಿಕಾರಿ ಸೌಮ್ಯ ಪೊನ್ನಪ್ಪ ಅವರು ಮಾತನಾಡಿ 2023-24ನೇ ಸಾಲಿನಲ್ಲಿ ಕೊಡಗಿನಲ್ಲಿ ಪ್ರಾರಂಭಿಸಿದ ಸಾಕ್ಷರತಾ ಕಾರ್ಯಕ್ರಮ ಯಶಸ್ವಿ ಮಾಡಿದ ಬಿ.ಆರ್‍ಪಿ, ಸಿಆರ್‍ಪಿಗಳ ಪರಿಶ್ರಮ ಶ್ಲಾಘನೀಯ ಎಂದರು ಹೇಳಿದರು.
ಪಿ.ಎಂ.ಶ್ರೀ ಶಾಲೆಯ ಎಸ್‍ಡಿಎಂಸಿ ಸಮಿತಿಯ ಅಧ್ಯಕ್ಷರಾದ ಚಂದನ್ ಕುಮಾರ್ ಅವರು ಮಾತನಾಡಿದರು, ಸಾಕ್ಷರತಾ ಇಲಾಖೆಯಿಂದ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸಿ.ಸೌಮ್ಯ, ಡಯಟ್‍ನ ಹಿರಿಯ ಉಪನ್ಯಾಸಕರಾದ ಕೃಷ್ಣಪ್ಪ, ಸ್ವಾಮಿ, ಪುಷ್ಪ, ವಿಜಯ್, ಪಿ.ಎಂ.ಶ್ರೀ ಶಾಲೆಯ ಮುಖ್ಯೋಪಾಧ್ಯಾಯರಾದ ಸಣ್ಣಸ್ವಾಮಿ, ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರಾದ ಚಂದನ್ ಕುಮಾರ್, ಕಾರ್ಯಕ್ರಮದಲ್ಲಿ ಮೂರು ತಾಲ್ಲೂಕುಗಳ ಸಿಆರ್‍ಪಿ, ಬಿ.ಆರ್.ಪಿ.ಗಳು ಹಾಜರಿದ್ದರು.
ಪ್ರೌಢಶಾಲಾ ಪವಿತ್ರ ಮತ್ತು ತಂಡದವರು ಪ್ರಾರ್ಥಿಸಿದರು. ಡಯಟ್ ಉಪನ್ಯಾಸಕರಾದ ಹೇಮಂತ್ ರಾಜ್ ಅವರು ಸ್ವಾಗತಿಸಿದರು. ಸಿ.ಆರ್.ಪಿ ಶಾಂತಕುಮಾರ್ ಅವರು ನಿರೂಪಿಸಿದರು, ಬಿ.ಆರ್.ಪಿ ಪುಷ್ಪ ವಂದಿಸಿದರು.