ಅ 18 ರಂದು ಜಾನಪದ ದಸರಾ ಕಲಾತಂಡಗಳಿಂದ ಅಜಿ೯ ಆಹ್ವಾನ; ಕೊಡಗು ಜಾನಪದ ಪರಿಷತ್ ನಿಂದ ಮಡಿಕೇರಿಯಲ್ಲಿ 5 ನೇ ವಷ೯ದ ಜಾನಪದ ದಸರಾ
admincoorgdaily

ಮಡಿಕೇರಿ ಸೆ.22 - ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ವತಿಯಿಂದ ಕೊಡಗು ಜಾನಪದ ಪರಿಷತ್ ಸಹಯೋಗದಲ್ಲಿ 5 ನೇ ವಷ೯ದ ಜಾನಪದ ದಸರಾವನ್ನು ಅಕ್ಟೋಬರ್ 18 ರಂದು ಭಾನುವಾರ ಆಯೋಜಿಸಲಾಗಿದೆ ಎಂದು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮತ್ತು ಜಾನಪದ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ.
ಅ. 18 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಜಾನಪದ ಕಲಾ ಪ್ರದಶ೯ನಗಳು ಆಯೋಜಿಸಲ್ಪಟ್ಟಿವೆ. ಇದೇ ಸಂದಭ೯ ವೇದಿಕೆ ಮುಂಬದಿ ಜಾನಪದ ವಸ್ತು ಪ್ರದಶ೯ನ, ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದಿಂದ ಜಾನಪದ ಕಲಾಜಾಥಾ ಕೂಡ ಜರುಗಲಿದೆ ಎಂದು ಜಾನಪದ ಪರಿಷತ್ ಪ್ರಕಟಣೆ ತಿಳಿಸಿದೆ.
ಜಾನಪದ ದಸರಾ ಸಂದಭ೯ ಕೊಡಗಿನ ಜಾನಪದ ಕಲಾವಿದರಿಗೆ ವೈವಿಧ್ಯಮಯ ಕಲಾ ಪ್ರದಶ೯ನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊಡಗಿನ ಜಾನಪದ ಕಲಾತಂಡಗಳು, ಕಲಾವಿದರು ಜಾನಪದ ದಸರಾ ಸಂದಭ೯ ನೀಡಲು ಇಚ್ಚಿಸುವ ಪ್ರದಶ೯ನದ ಬಗ್ಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಆಸಕ್ತ ಕಲಾವಿದರು, ಕಲಾತಂಡಗಳು ಅಕ್ಟೋಬರ್ 6 ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಲು ಸಂಪಕ೯ - ಎಸ್.ಐ. ಮುನೀರ್ ಅಹ್ಮದ್ ಪ್ರಧಾನ ಕಾಯ೯ದಶಿ೯, ಜಾನಪದ ಪರಿಷತ್, 9886181613, ಎಸ್.ಎಸ್. ಸಂಪತ್ ಕುಮಾರ್, ಖಜಾಂಜಿ ಜಾನಪದ ಪರಿಷತ್ - -9448614999