IPL 2025; ಎರಡನೇ ಕ್ವಾಲಿಫೈಯರ್ ಪಂದ್ಯ ಶ್ರೇಯಸ್ ಅಯ್ಯರ್ ಬೊಂಬಾಟ್ ಆಟ ಪಂಜಾಬ್ ತಂಡಕ್ಕೆ ಭರ್ಜರಿ ಗೆಲುವು
admincoorgdaily
ಅಹಮದಾಬಾದ್;ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್ ನಲ್ಲಿ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ತಂಡವು ಗೆಲುವು ಸಾಧಿಸುವುದರ ಮೂಲಕ ಫೈನಲ್ ಗೆ ಲಗ್ಗೆಯಿಟ್ಟಿದೆ.ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ಸಂಯೋಜಿತ ಆಟದ ಮೂಲಕ ಪಂಜಾಬ್ ತಂಡಕ್ಕೆ ಮುಂಬೈ ವಿರುದ್ಧ ಭರ್ಜರಿ ಗೆಲುವು ಒಲಿದಿದೆ.ಶ್ರೇಯಸ್ ಅಯ್ಯರ್ ಔಟ್ ಆಗದೆ 87 ರನ್ ಗಳಿಸಿದರು.ಜೂನ್ 03 ರಂದು ಫೈನಲ್ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಎದುರಿಸಲಿದೆ.