IPL 2025: ಹೈದರಾಬಾದ್ ಬೌಲಿಂಗ್ ದಾಳಿಗೆ ಮಂಕಾದ ಆರ್.ಸಿ.ಬಿ! 42 ರನ್ ಗಳಿಂದ ಸೋಲು ಕಂಡ ಬೆಂಗಳೂರು
admincoorgdaily
ಲಕ್ನೋ: ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾರಕ ಬೌಲಿಂಗ್ ದಾಳಿಗೆ ಮಂಕಾದ ಆರ್‌ಸಿಬಿ ಬ್ಯಾಟಿಂಗ್ ಯೂನಿಟ್ 189 ರನ್ ಗಳಿಗೆ ಆಲ್ ಔಟ್ ಆಗಿ 42 ರನ್ ಗಳಿಂದ ಸೋಲು ಕಂಡಿದೆ.ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು SRH ತಂಡಕ್ಕೆ ಅವಕಾಶ ನೀಡಿದ ಆರ್.ಸಿ.ಬಿ ತಂಡವು,ಇಶಾನ್ ಕಿಶನ್ ಅವರ ಮಾರಕ ಬ್ಯಾಟಿಂಗ್ ಪ್ರದರ್ಶನಕ್ಕೆ ದೊಡ್ಡ ಮೊತ್ತದ ಚೇಸಿಂಗ್ ಮಾಡುವ ಸನ್ನಿವೇಶ ಎದುರಾಗಿತ್ತು.ಮೊದಲು ಬ್ಯಾಟ್ ಮಾಡಿದ್ದ SRH ನಿಗದಿತ 20 ಓವರ್ ಗಳಲ್ಲಿ ಇಶಾನ್ ಕಿಶನ್ ಅವರ 94 ರನ್ ಗಳ ನೆರವಿನಿಂದ 230 ರನ್ ಕಲೆ ಹಾಕಿತು.ಆರಂಭದ ಪವರ್ ಪ್ಲೇ ಓವರ್ ನಲ್ಲಿ ಅಬ್ಬರಿಸಿದ ಆರ್.ಸಿ ತಂಡವು ಮಧ್ಯಮ ಕ್ರಮಾಂಕದಲ್ಲಿ ಸಂಪೂರ್ಣ ವೈಫಲ್ಯ ಕಂಡು ಸೋಲು ಅನುಭವಿಸಿದೆ.