Kodagu

ಮಾಜಿ ಸಚಿವ ದಿ.ಟಿ. ಜಾನ್ ಒಡೆತನದ ರೆಸಾರ್ಟ್ ಮೇಲೆ ಐಟಿ ದಾಳಿ

admincoorgdaily

ಮಾಜಿ ಸಚಿವ ದಿ.ಟಿ. ಜಾನ್ ಒಡೆತನದ ರೆಸಾರ್ಟ್ ಮೇಲೆ ಐಟಿ ದಾಳಿ
ಮಡಿಕೇರಿ: ಮಾಜಿ ಸಚಿವ ದಿವಂಗತ ಟಿ. ಜಾನ್ ಅವರ ಕುಟುಂಬದ ಒಡೆತನದ ರೆಸಾರ್ಟ್‌ಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಡಿಕೇರಿಯ ಮೇಕೇರಿ ಬಳಿ ಇರುವ ಟಿ. ಜಾನ್ ಪುತ್ರರ ಒಡೆತನದ ಪ್ರತಿಷ್ಠಿತ ಕೂರ್ಗ್ ವೈಲ್ಡರ್‌ನೆಸ್ ರೆಸಾರ್ಟ್‌ನಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಅಧಿಕಾರಿಗಳು ವ್ಯಾಪಕ ತಪಾಸಣೆ ನಡೆಸುತ್ತಿದ್ದಾರೆ.

ದಾಳಿ ವೇಳೆ ರೆಸಾರ್ಟ್‌ನ ಎಲ್ಲಾ ಸಿಬ್ಬಂದಿಯ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದು, ಸಿಬ್ಬಂದಿಯನ್ನು ಒಂದೆಡೆ ಕೂಡಿಹಾಕಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಕೇರಳದ ಕೊಚ್ಚಿಯಲ್ಲಿರುವ ಟಿ. ಜಾನ್ ಸಮೂಹದ ಉದ್ಯಮಗಳ ಮೇಲೂ ಏಕಕಾಲದಲ್ಲಿ ಐಟಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.