Kodagu

ಡಿ.28 ರಿಂದ ಜೈ ಕನ್ನಡ ರಥಯಾತ್ರೆ

admincoorgdaily

ಡಿ.28 ರಿಂದ ಜೈ ಕನ್ನಡ ರಥಯಾತ್ರೆ
ಮಡಿಕೇರಿ: ಅನೇಕಲ್‌ನಿಂದ ಡಿ.28ರಂದು ಆರಂಭವಾಗುವ ಜೈ ಕನ್ನಡ ರಥಯಾತ್ರೆಯು ರಾಜ್ಯಾದ್ಯಂತ ಸಂಚರಿಸಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪ್ರೊ.ಕೃಷ್ಣೇಗೌಡ ತಿಳಿಸಿದ್ದಾರೆ.

ಸರ್ಕಾರಿ ಶಾಲೆ ಉಳಿಸಿ, ಸಮಾನ ಶಿಕ್ಷಣ ವ್ಯವಸ್ಥೆ ನಿರ್ಮಿಸುವುದೇ ಯಾತ್ರೆಯ ಗುರಿಯಾಗಿದೆ. ಇದು ಆಂಗ್ಲ ಭಾಷೆಯ ವಿರುದ್ಧದ ಹೋರಾಟವಲ್ಲ. ಶಿಕ್ಷಣದ ವಿರುದ್ಧವೂ ಅಲ್ಲ. ಪ್ರತಿಯೊಂದು ಹಂತದಲ್ಲೂ ಕನ್ನಡ ಕಲಿಕೆಗೆ ಅವಕಾಶ ಸಿಗಬೇಕು. ಮಕ್ಕಳ ಶಿಕ್ಷಣದ ಹಕ್ಕನ್ನು ಎರಡು ಭಾಗಗಳಾಗಿ ಒಡೆಯುವ ಪದ್ಧತಿಗೆ ನಾವು ವಿರೋಧಿಗಳು. ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿವೆ. ಇದರಿಂದ ಬಡ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಅಧಿಕಾರಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪ್ರಮುಖರಾದ ತನು ಕಿಶೋರ್, ಸುರೇಶ್, ಪ್ರಭು, ಸಜೀಲ್ ಕುಮಾರ್ ಉಪಸ್ಥಿತರಿದ್ದರು.