Kodagu

ಕುಟ್ಟ ಶ್ರೀಕೃಷ್ಣ ದೇವಸ್ಥಾನದಲ್ಲಿ ಜನ್ಮಾಷ್ಟಮಿ ಸಂಭ್ರಮ: ಶಾಸಕ ಎ.ಎಸ್. ಪೊನ್ನಣ್ಣ ದಂಪತಿ ಭಾಗಿ

admincoorgdaily

ಕುಟ್ಟ ಶ್ರೀಕೃಷ್ಣ ದೇವಸ್ಥಾನದಲ್ಲಿ ಜನ್ಮಾಷ್ಟಮಿ ಸಂಭ್ರಮ: ಶಾಸಕ ಎ.ಎಸ್. ಪೊನ್ನಣ್ಣ ದಂಪತಿ ಭಾಗಿ
ಪೊನ್ನಂಪೇಟೆ:ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪುಟ್ಟ ಶ್ರೀಕೃಷ್ಣ ದೇವಸ್ಥಾನದಲ್ಲಿ ಇಂದು ನಡೆದ ವಿಶೇಷ ಕಾರ್ಯಕ್ರಮಕ್ಕೆ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಧರ್ಮಪತ್ನಿ ಕಾಂಚನ್ ಪೊನ್ನಣ್ಣ ಅವರೊಂದಿಗೆ ಆಗಮಿಸಿದರು.

ದೇವಸ್ಥಾನದಲ್ಲಿ ನಡೆಯುತ್ತಿರುವ ಕೃಷ್ಣಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರಿಗೂ ಹಬ್ಬದ ಶುಭಾಶಯ ಕೋರಿದ ಶಾಸಕರು, ಅಷ್ಟಮಿಯ ಶುಭ ಸಂದೇಶ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ಕುಟ್ಟ ವಲಯ ಅಧ್ಯಕ್ಷ ರಾಮಕೃಷ್ಣ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಕುಟ್ಟ ಮಾಜಿ ವಲಯ ಅಧ್ಯಕ್ಷ ಮುಕಟೀರ ನವೀನ್ ಅಯ್ಯಪ್ಪ, ಶ್ರೀಮಂಗಲ ವಲಯ ಅಧ್ಯಕ್ಷ ಪಾಲ್ವಿನ್ ಪೂಣಚ್ಚ, ತಿತೀರ ಮಂದಣ್ಣ, ರಾಜನ್, ಸುರೇಶ್, ಶೇಖರ್, ಫಾರ್ದಿನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.