Kodagu

ಗೋಣಿಕೊಪ್ಪದಲ್ಲಿ ಜೀಲಾನಿ ಅನುಸ್ಮರಣೆ ಮತ್ತು ಪ್ರಾರ್ಥನಾ ಸಂಗಮ

admincoorgdaily

ಗೋಣಿಕೊಪ್ಪದಲ್ಲಿ ಜೀಲಾನಿ ಅನುಸ್ಮರಣೆ ಮತ್ತು ಪ್ರಾರ್ಥನಾ ಸಂಗಮ
1002568296.jpg


ಗೋಣಿಕೊಪ್ಪ: ನೂರುಲ್ ಹುದಾ ಮದರಸ ಆವರಣದಲ್ಲಿ ಜೀಲಾನಿ ಅನುಸ್ಮರಣೆ ಹಾಗೂ ಪ್ರಾರ್ಥನಾ ಸಂಗಮವು ಮಹಲ್ ಅಧ್ಯಕ್ಷ ಅಶ್ರಫ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಸ್ಥಳೀಯ ಖತೀಬ್ ಮೊಹಮ್ಮದ್ ಅಲಿ ಫೈಝಿ ಅವರು ಜೀಲಾನಿ ಅವರ ಜೀವನ ಚರಿತ್ರೆಯನ್ನು ವಿವರಿಸಿ, ಅವರ ಜೀವನ ಶೈಲಿಯನ್ನು ಮಕ್ಕಳು ರೋಲ್ ಮಾಡೆಲ್ ಆಗಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಹಲ್ ಕಾರ್ಯದರ್ಶಿ ಅಬ್ದುಲ್ ಸಲಾಂ ಅವರು ಪ್ರಾಸ್ತಾವಿಕ ಭಾಷಣ ಮಾಡಿ, ಮಕ್ಕಳು ಸತ್ಯಸಂಧರಾಗಿ ಬೆಳೆದು ಎಲ್ಲರಿಗೂ ಮಾದರಿಯಾಗಬೇಕು ಎಂದು ಕರೆ ನೀಡಿದರು.

ಇಂಪಾದ ಶೈಲಿಯಲ್ಲಿ ನಡೆದ ಮೌಲೀದ್ ಕಾರ್ಯಕ್ರಮಕ್ಕೆ ಜುಬೇರ್ ಫೈಝಿ, ಮುಜೀಬ್ ಅಝ್ಹರಿ ನೇತೃತ್ವ ನೀಡಿದರು.
ಕಾರ್ಯಕ್ರಮದಲ್ಲಿ ಮಹಲ್ ಉಪಾಧ್ಯಕ್ಷ ಶೌಕತ್ ಅಲಿ, ಖಜಾಂಚಿ ಮೊಯ್ದೀನ್, ಮದರಸ ಕನ್ವೀನರ್ ಅಶ್ರಫ್, ಸಂಸುದ್ದೀನ್ ಶರೀಫ್, ನೌಶಾದ್, ಖಾದರ್ ಮುಸ್ಲಿಯಾರ್, ಮಜೀದ್ ಬಾಖವಿ, ಶಫೀಕ್ ದಾರಿಮಿ, ಗಫೂರ್ ಬಾಖವಿ, ಅಝೀಝ್ ಬಾಖವಿ, ಸಹದ್ ಫೈಝಿ ಉಪಸ್ಥಿತರಿದ್ದರು.

NHM ಪ್ರಾಂಶುಪಾಲರಾದ ರಿಯಾಜ್ ಬಾಖವಿ ಸ್ವಾಗತಿಸಿದರು, MC ಅಶ್ರಫ್ ಮುಸ್ಲಿಯಾರ್ ವಂದಿಸಿದರು.