ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಜ್ಯೂಡಿ ವಾಜ್ ಆಯ್ಕೆ: ಪ್ರ.ಕಾರ್ಯದರ್ಶಿಯಾಗಿ ಎನ್.ಪಿ. ದಿನೇಶ್ ನಾಯರ್
admincoorgdaily

ವಿರಾಜಪೇಟೆ: ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘ ವಿರಾಜಪೇಟೆ ಘಟಕದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನಗರದ ಖಾಸಗಿ ಬಸ್ ನಿಲ್ದಾಣದ ಸಂಘದ ಕಚೇರಿಯಲ್ಲಿ ನಡೆದ ಮಹಾಸಭೆಯು ಕೆ.ಬಿ. ಸುರೇಶ್ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುರೇಶ್ ದೇವಯ್ಯ, ಖಾಸಗಿ ಬಸ್ ಕಾರ್ಮಿಕರು ಹಲವು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದಿನಬಳಕೆ ವಸ್ತುಗಳ ಬೆಲೆ ಗಗನಮುಖಿಯಾಗಿದ್ದು ದಿನದೂಡುವುದು ಕಷ್ಟಸಾಧ್ಯವಾಗಿದೆ. ಸಂಘದ ಸದಸ್ಯರಿಗೆ ಆರೋಗ್ಯ ಸಮಸ್ಯೆ ಎದುರಾದಾಗ ಸಂಘವು ನೆರವಿನ ಹಸ್ತ ಚಾಚಿದೆ, ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅಧಿಕಾರದ ಅವಧಿಯಲ್ಲಿ ಸಹಕರಿಸಿದ ಸರ್ವ ಸದಸ್ಯರಿಗೆ ಚಿರಋಣಿ, ಮುಂದಿನ ನೂತನ ಆಡಳಿತ ಮಂಡಳಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ನೂತನ ಪದಾಧಿಕಾರಿಗಳು:
ಅಧ್ಯಕ್ಷರಾಗಿ ಜ್ಯೂಡಿ ವಾಜ್, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಪಿ. ದಿನೇಶ್ ನಾಯರ್, ಗೌರವಾಧ್ಯಕ್ಷರಾಗಿ ಕೆ.ಬಿ. ಸುರೇಶ್ ದೇವಯ್ಯ, ಉಪಾಧ್ಯಕ್ಷರಾಗಿ ಅಳಂಡ ಕಸ್ತೂರಿ ಚೆಂಗಪ್ಪ, ಖಜಾಂಚಿಯಾಗಿ ಬಿ.ಬಿ. ವಿನಂತ್ ಆಯ್ಕೆಯಾದರು.
ನಿರ್ದೇಶಕರುಗಳಾಗಿ ಅಜೇಯ್ ಕೆ.ಇ., ಎಂ.ಕೆ. ಮಹೇಶ್, ಕೆ.ಎನ್. ಜೀವನ್, ಕುಪ್ಪಂಡ ಪ್ರಸಾದ್ ದೇವಯ್ಯ, ದಿನೇಶ್ ವಿ.ಎ., ಸತೀಶ್ ಎಂ.ಸಿ., ರಂಜು ಎಸ್., ಜಕರಿಯಾ ಪಿ.ಎಂ. ಮತ್ತು ವಿನೋದ್ ಕುಮಾರ್ ಆಯ್ಕೆಯಾದರು.
ಮಹಾಸಭೆಯಲ್ಲಿ ಸಂಘದ ಸರ್ವ ಸದಸ್ಯರು ಹಾಜರಿದ್ದರು.
(ವರದಿ: ಕಿಶೋರ್ ಕುಮಾರ್ ಶೆಟ್ಟಿ)