ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ಕೆ.ಎ ಯಾಕೂಬ್ ರಾಜೀನಾಮೆ
admincoorgdaily

ಮಡಿಕೇರಿ: ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಕೆ.ಎ.ಯಾಕುಬ್ ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರನ್ನು ಮತಬ್ಯಾಂಕ್ ಆಗಿ ಮಾತ್ರ ನೋಡಲಾಗುತ್ತಿದೆ. ಅಧಿಕಾರದಲ್ಲಿ ಪಾಲು ನೀಡುತ್ತಿಲ್ಲ. ಜಾತ್ಯಾತೀತ ನಿಲುವಿನಲ್ಲಿ ವರ್ಷಗಳ ಕಾಲ ಪಕ್ಷಕ್ಕಾಗಿ ಶ್ರಮಿಸಿದರೂ ಸೂಕ್ತ ಗೌರವ ದೊರಕಿಲ್ಲ. ನಿಗಮ ಮಂಡಳಿಗಳಲ್ಲಿ ಅವಕಾಶ ನೀಡದಿರುವುದು ಸೇರಿದಂತೆ ಪಕ್ಷದೊಳಗೆ ಅಲ್ಪಸಂಖ್ಯಾತ ಮುಖಂಡರಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಈ ಬೇಸರದಿಂದಲೇ ಈ ತೀರ್ಮಾನ ಕೈಗೊಂಡಿದ್ದೇನೆ ಎಂದರು.
ಜಿಲ್ಲೆಯಲ್ಲಿ ಇಬ್ಬರು ಶಾಸಕರ ಜಯದಲ್ಲಿ ಅಲ್ಪಸಂಖ್ಯಾತ ಮತದಾರರ ಪಾತ್ರ ದೊಡ್ಡದಿದ್ದರೂ, ಅವರಿಗೆ ನ್ಯಾಯ ಸಿಕ್ಕಿಲ್ಲ. ಜಿ.ಪಂ. ವ್ಯಾಪ್ತಿ ಹಂಚಿಕೆಯಲ್ಲೂ ನಿರ್ಲಕ್ಷಿಸಲಾಗಿದೆ. ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ಹೋಗಬಹುದೆಂಬ ಆತಂಕದಿಂದಲೇ ಮುಖಂಡರನ್ನು ದೂರ ಇಡಲಾಗುತ್ತಿದೆ. ಇದಕ್ಕೆ ಇಬ್ಬರು ಶಾಸಕರು ಹಾಗೂ ಜಿಲ್ಲಾಧ್ಯಕ್ಷರು ಹೊಣೆ ಎಂದು ಆರೋಪಿಸಿದರು.
ಇನ್ನು ಪಕ್ಷದ ಚಟುವಟಿಕೆಯಿಂದ ದೂರವಿದ್ದು, ಮತದಾನಕ್ಕೆ ಮಾತ್ರ ಸೀಮಿತವಾಗುತ್ತೇನೆ. ಆದರೆ ಕಾಂಗ್ರೆಸ್ ತತ್ವವನ್ನು ತ್ಯಜಿಸುವುದಿಲ್ಲ ಎಂದರು.