Kodagu

ಕಡಂಗ ಬದ್ರಿಯಾ ಮಸೀದಿ ರಸ್ತೆ ಉದ್ಘಾಟನೆ

admincoorgdaily

ಕಡಂಗ ಬದ್ರಿಯಾ ಮಸೀದಿ ರಸ್ತೆ ಉದ್ಘಾಟನೆ
ಮಡಿಕೇರಿ: ತಾಲೂಕಿನ ಕಡಂಗ ಅರಪಟ್ಟು ಬದ್ರಿಯಾ ಸುನ್ನಿ ಜುಮಾ ಮಸೀದಿಯ ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಾಂಕ್ರೀಟ್ ರಸ್ತೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೌಕತ್ ಆಲಿ, ವಲಯ ಅಧ್ಯಕ್ಷ ಕೋದಿರ ವಿನೋದ್ ನಾಣಯ್ಯ, ಮಾಜಿ ಅಧ್ಯಕ್ಷ ಇಸ್ಮಾಯಿಲ್, ಮಸೀದಿ ಅಧ್ಯಕ್ಷ ಉಸ್ಮಾನ್, ಉಪಾಧ್ಯಕ್ಷ ರಶೀದ್ ಐಬಿಎಂ ಹಾಗೂ ರಜಾಕ್ ಕೆ.ಎ., ಕೋಶಾಧಿಕಾರಿ ರಜಾಕ್ ಸಿ.ಎ., ಕಾರ್ಯದರ್ಶಿ ರಾಶೀದ್, ಮುಖಂಡರಾದ ಶಾಫಿ ಎಡಪಾಲ, ಮಹಮ್ಮದ್, ರಾಣಿ ಗಣಪತಿ, ಪ್ರಕಾಶ್ ಕಾರ್ಯಪ್ಪ, ಮೊಯ್ದು ಮುಸ್ಲಿಯಾರ್, ಕುಂಡಚ್ಚಿರ ಮಂಜು ದೇವಯ್ಯ, ಅಜ್ಜಿಕುಟ್ಟಿರ ಪೊನ್ನು, ಆದಿತ್ಯ ಪೆಮ್ಮಯ್ಯ, ಉದಯ್ ಮಾದಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.