ಮುತ್ನಾಡ್ ಕೊಡವ ಸಮಾಜ ಕಾಲೂರು ವತಿಯಿಂದ ಕೈಲ್ ಪೊಳ್ದ್ ಕ್ರೀಡಾಕೂಟ ಸಂಭ್ರಮ
admincoorgdaily

ಕಾಲೂರು: ಮುತ್ನಾಡ್ ಕೊಡವ ಸಮಾಜ ಕಾಲೂರು ವತಿಯಿಂದ ಕೈಲ್ ಪೊಳ್ದ್ ಕ್ರೀಡಾಕೂಟ ಸೆ.13 ರ ಭಾನುವಾರ ಸಂಭ್ರಮದಿಂದ ಜರುಗಿತು.
ಸಾಂಪ್ರದಾಯಿಕ ಆಯುಧ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಗೌರವಾಧ್ಯಕ್ಷ ಕಾರೆರ ಗಣಪತಿ ಹಾಗೂ ಅಧ್ಯಕ್ಷ ಅಯ್ಯಾಲಪಂಡ ಮಿಟ್ಟು ಉತ್ತಪ್ಪ ಅವರು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ನಂತರ ನಡೆದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಸಿದ್ದಂಡ ಪವನ್, ಕಾರೇರ ರಾಜಮಣಿ ತಿಮ್ಮಯ್ಯ, ನಂದೀರ ದೃಶ್ಯ ಚಂಗಪ್ಪ, ನಂದಾಲಪಂಡ ಸವಿ, ಅಯ್ಯಾಲಪಂಡ ರುಶಿಕ್ ಅವರು ಬಹುಮಾನ ಪಡೆದರು. ಬಳಿಕ ವಿವಿಧ ಕ್ರೀಡೆಗಳು ನಡೆದವು.
ಸುಮಾರು 150ಕ್ಕೂ ಹೆಚ್ಚು ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದು, ಸಾಂಪ್ರದಾಯಿಕ ಊಟೋಪಚಾರ ವ್ಯವಸ್ಥೆ ಮಾಡಲಾಗಿತ್ತು. ಕೊನೆಯಲ್ಲಿ ಸಂಪ್ರದಾಯದಂತೆ ನಮ್ಮ ಗುರು ಕಾರೋಣರಿಗೆ ಅಕ್ಕಿ ಹಾಕುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.