ಕಲ್ಲು ಗುಡ್ಡೇಶ್ವರ ಪ್ರಗತಿಬಂಧು ಸ್ವಸಹಾಯ ಸಂಘದ 17ನೇ ವರ್ಷದ ವಾರ್ಷಿಕೋತ್ಸವ ಆಚರಣೆ
admincoorgdaily

ವಿರಾಜಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ವಿರಾಜಪೇಟೆ ತಾಲೂಕು, ಮಾಯಮುಡಿ ವಲಯದ ಮಾಯಮುಡಿ ಕಾರ್ಯಕ್ಷೇತ್ರದ ಮೈಮುನ ಅವರ ಮನೆಯ ಆವರಣದಲ್ಲಿ ಶ್ರೀ ಕಲ್ಲು ಗುಡ್ಡೇಶ್ವರ ಪ್ರಗತಿಬಂಧು ಸ್ವಸಹಾಯ ಸಂಘದ 17ನೇ ವರ್ಷದ ವಾರ್ಷಿಕೋತ್ಸವವನ್ನು ಸಂಘದ ಸದಸ್ಯರು ಸಂಭ್ರಮ ಹಾಗೂ ಸಡಗರದಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ಸಂಘವು ಕಳೆದ 17 ವರ್ಷಗಳಿಂದ ನಡೆದು ಬಂದ ಹಾದಿ ಹಾಗೂ ಸಂಘದ ಮೂಲಕ ಸದಸ್ಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿರುವ ಬಗ್ಗೆ ಚರ್ಚಿಸಲಾಯಿತು. ಸಂಘದ ಸದಸ್ಯರು ಸಂಘದಿಂದ ದೊರೆತ ಆರ್ಥಿಕ ಸಹಕಾರ, ಉಳಿತಾಯದ ಮಹತ್ವ ಹಾಗೂ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ದೊರೆತ ಅವಕಾಶಗಳ ಕುರಿತು ತಮ್ಮ ಉತ್ತಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಸಂಘದ ಪ್ರಬಂಧಕರಾದ ಶಾಂತ, ಸಂಯೋಜಕರಾದ ನಂದಿನಿ, ಕೋಶಾಧಿಕಾರಿಯಾದ ಸುಮ, ವಲಯ ಮೇಲ್ವಿಚಾರಕರಾದ ವಸಂತ್, ಸೇವಾಪ್ರತಿನಿಧಿಯಾದ ಪುಷ್ಪ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.