ಆಲೂರು ಸಿದ್ದಾಪುರ ರೋಟರಿ ಕ್ಲಬ್ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಕ್ರೀಡಾಕೂಟ
admincoorgdaily

ಶನಿವಾರಸಂತೆ::-ಸಮಿಪದ ಆಲೂರು ಸಿದ್ದಾಪುರ ರೋಟರಿ ಮಲ್ಲೇಶ್ವರ ವತಿಯಿಂದ ರೋಟರಿ ಜಿಲ್ಲಾ ಕಾರ್ಯಕ್ರಮವಾದ ನಮ್ಮ ಹಬ್ಬ ನಮ್ಮ ಸೇವೆ ಇದರ ಅಡಿಯಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ರೋಟರಿ ಭವನದಲ್ಲಿ ಆಚರಿಸಲಾಯಿತು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ರೋಟರಿ ಕುಟುಂಬದವರಿಗೆ ರೋಟರಿ ಭವನದ ಮುಂಭಾಗದಲ್ಲಿ ವಿವಿಧ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು.
ಪುರುಷರಿಗೆ ಹಗ್ಗ ಜಗ್ಗಾಟ, ಮಡಿಕೆ ಹೊಡೆಯುವುದು, ಭಾರದ ಗುಂಡು ಎಸೆತ ಹಾಗೂ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಬಾರದ ಗುಂಡು ಎಸೆತ, ವಿಷದ ಚೆಂಡು, ಬಸ್ಸು ಹುಡುಕಾಟ, ಬಕೆಟ್‌ಗೆ ಬಾಲ್ ಹಾಕುವುದು ಇನ್ನು ಮುಂತಾದ ಸ್ಪರ್ಧೆಯನ್ನು ಏರ್ಪಡಿಸಲಾಗಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಸಂಪತ್, ಕಾರ್ಯದರ್ಶಿ ಪಿ.ಕೆ.ಸತೀಶ್, ಮುಂದಿನ ಸಾಲಿನ ಅಧ್ಯಕ್ಷ ಎ.ಜೆ.ವಿಜಯ್ ಮತ್ತು ರೋಟರಿ ಕ್ಲಬ್ ಪದಾಧಿಕಾರಿಗಳು ಸದಸ್ಯರು ರೋಟರಿ ಕುಟುಂಬ ಸದಸ್ಯರು ಹಾಜರಿದ್ದರು.