Kodagu

ಕಾಂತಪ್ಪಗೆ ಪಿಎಚ್‍ಡಿ ಪದವಿ

admincoorgdaily

ಕಾಂತಪ್ಪಗೆ ಪಿಎಚ್‍ಡಿ ಪದವಿ
ಮಡಿಕೇರಿ:-ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹುಳಗೋಳ ಗ್ರಾಮದ ದಿವಂಗತ ಹೊಸಳ್ಳಿ ಭೀಮರಾಯ ಅವರ ಕಿರಿಯ ಪುತ್ರರಾದ ಕಾಂತಪ್ಪ ಅವರು  ರಸಾಯನಶಾಸ್ತ್ರ ವಿಭಾಗದಲ್ಲಿ ಮಂಡಿಸಿದ ಪಿಎಚ್.ಡಿ. ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ, ಘಟಕ ಕಾಲೇಜಾದ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾದ ಕಾಂತಪ್ಪ ಅವರು ಮಂಡಿಸಿದ “A Voltammetric Determination of Some Electroactive Molecules Using Carbon-Based Electrodes,  ಎಂಬ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿ.ಎಚ್.ಡಿ. ಪದವಿ ನೀಡಿದೆ.

ಇವರು ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಜೆ.ಜಿ.ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ನಡೆಸಿದ್ದಾರೆ.