Kodagu

ಅ.11 ರಂದು ಕರಗಗಳ ನಗರ ಪ್ರದಕ್ಷಿಣೆ ಪ್ರಾರಂಭೋತ್ಸವ

admincoorgdaily

ಅ.11 ರಂದು ಕರಗಗಳ ನಗರ ಪ್ರದಕ್ಷಿಣೆ ಪ್ರಾರಂಭೋತ್ಸವ
ಮಡಿಕೇರಿ:-ಮಡಿಕೇರಿ ನಗರದ ಇತಿಹಾಸ ಪ್ರಸಿದ್ದ 4 ಶಕ್ತಿ ದೇವತೆಗಳ ಕರಗಳನ್ನು ಅಕ್ಟೋಬರ್, 11 ರಂದು ಸಂಜೆ 5 ಗಂಟೆಗೆ ಮಹದೇವಪೇಟೆಯ ಪಂಪಿನ ಕೆರೆ ಬಳಿ ನಗರ ದಸರಾ ಸಮಿತಿ ವತಿಯಿಂದ ಸಾಂಪ್ರದಾಯಿಕ ಪೂಜೆಯನ್ನರ್ಪಿಸಿ ನಗರ ಪ್ರದಕ್ಷಿಣೆಗೆ ಕರಗಳನ್ನು ಬರಮಾಡಿಕೊಳ್ಳಲಾಗುವುದು. 
ಆದ್ದರಿಂದ ಮಡಿಕೇರಿ ನಗರದ ಹಾಗೂ ರಾಜ್ಯದ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ವರ್ಷದ ದಸರಾ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಸಹಕಾರ ನೀಡುವಂತೆ ಮಡಿಕೇರಿ ನಗರಸಭೆ ಹಾಗೂ ನಗರ ದಸರಾ ಸಮಿತಿಯ ಅಧ್ಯಕ್ಷರಾದ ಪಿ.ಕಲಾವತಿ ಅವರು ಕೋರಿದ್ದಾರೆ.