ಕರಾಟೆ: ಅದ್ವೈತ್‌ಗೆ ದ್ವಿತೀಯ ಸ್ಥಾನ
admincoorgdaily

ಮಡಿಕೇರಿ: ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ತಾಲೂಕಿನ ವೆಲ್ಲೂರಿನಲ್ಲಿ ಜೆಎಸ್‌ಕೆಎ(ಜಪಾನ್ ಶೋಟೋಕನ್ ಕರಾಟೆ ಅಸೋಸಿಯೇಷನ್) ವತಿಯಿಂದ ಇತ್ತೀಚೆಗೆ ನಡೆದ ಅಂತರರಾಜ್ಯ ಕರಾಟೆ ಸ್ಪರ್ಧೆಯಲ್ಲಿ ಕೊಡಗಿನ ಪೊನ್ನಂಪೇಟೆಯ ಸಂತ ಆಂತೋಣಿ ಆಂಗ್ಲ ಮಾಧ್ಯಮ ಶಾಲೆಯ ೬ನೇ ತರಗತಿ ವಿದ್ಯಾರ್ಥಿ ಎಂ.ಎಲ್.ಅದ್ವೈತ್ ೧೧ರಿಂದ ೧೩ರ ವಯೋಮಾನದೊಳಗಿನ ಕುಮಿತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾನೆ.
ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಗ್ರಾಮದ ಮರಾಟಿ.ಎಸ್.ಲತಕುಮಾರ್ ಮತ್ತು ಎನ್.ಕೆ.ಸುಶೀಲಾ ಅವರ ಪುತ್ರನಾಗಿದ್ದು, ಸೆನ್ಸಾಯಿ ಬಿ.ಎಸ್.ಸಂತೋಷ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾನೆ. ದ್ವಿತೀಯ ಸ್ಥಾನಗಳಿಸಿದ ಅದ್ವೈತ್ ಅವರ ಭವಿಷ್ಯ ಉಜ್ವಲವಾಗಲಿ ಎಂದು ಪೋಷಕರು, ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಸೆವರೀನ್ ಡಿಸೋಜಾ ಹಾಗೂ ಶಿಕ್ಷಕರು ಹಾರೈಸಿದ್ದಾರೆ.