Kodagu

ಸುಂಟಿಕೊಪ್ಪದಲ್ಲಿ ಕರವೇ ಸ್ವಾಭಿಮಾನಿ ಸೇನೆ ಹೋಬಳಿ ಘಟಕ ಉದ್ಘಾಟನೆ

admincoorgdaily

ಸುಂಟಿಕೊಪ್ಪದಲ್ಲಿ ಕರವೇ ಸ್ವಾಭಿಮಾನಿ ಸೇನೆ ಹೋಬಳಿ ಘಟಕ ಉದ್ಘಾಟನೆ
ಸುಂಟಿಕೊಪ್ಪ:‌ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಹೋಬಳಿ ಘಟಕದ ಉದ್ಘಾಟನೆ ಮತ್ತು ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕುಶಾಲನಗರ ತಾಲೂಕು ಅಧ್ಯಕ್ಷ ಶಿವು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ ವಿ.ಎಸ್., ರಾಜ್ಯೋತ್ಸವ ಕಾರ್ಯಕ್ರಮದ ಖಜಾಂಜಿ ಅಂತೋನಿ, ಹಿರಿಯ ಸದಸ್ಯರಾದ ಕೆ.ಆರ್.ನಂಜಪ್ಪ, ವಿಲ್ಸನ್ ಹಾಗೂ ಹೋಬಳಿ ಯುವ ಘಟಕದ ಅಧ್ಯಕ್ಷ ಕ್ಲಿಫರ್ಡ್ ರೊಡ್ರಿಗಸ್ ನೇತೃತ್ವದಲ್ಲಿ ಹಲವು ಯುವಕರು ಸಂಘಟನೆಗೆ ಸೇರ್ಪಡೆಯಾದರು.

ನೂತನ ಪದಾಧಿಕಾರಿಗಳು:
- ಅಧ್ಯಕ್ಷರು: ಶರೀಫ್ ಎಂ.ಇ.
- ಉಪಾಧ್ಯಕ್ಷರು: ಶಹಾದ್ ವಿ.ಎ.

ನೂತನ ಸದಸ್ಯರು: ನಿತಿನ್ ಮಂದಣ್ಣ, ನಿತಿನ್ ಎನ್.ಎಸ್., ನವೀನ್, ಸಂಜಯ್ ಹೋಬಳಿ, ರೋಷನ್, ಸಾಧಿಕ್, ಸಮೀರ್, ಸಿದ್ದೀಕ್, ನಾಸೀರ್, ಕರ್ಣ, ರಾಜೇಶ್, ಹುಸೇನ್.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ, "ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗಿರುವುದು ಸಂತಸ ತಂದಿದೆ. ಸಮಾಜಮುಖಿ ಕೆಲಸಗಳ ಮೂಲಕ ಉತ್ತಮ ಹೆಸರು ಗಳಿಸಬೇಕು" ಎಂದು ಕರೆ ನೀಡಿದರು. ತಾಲೂಕು ಅಧ್ಯಕ್ಷ ಶಿವು ಮಾತನಾಡಿ, "ಒಗ್ಗಟ್ಟಿನಲ್ಲಿ ಬಲವಿದೆ. ಅನ್ಯಾಯದ ವಿರುದ್ಧ ನಮ್ಮ ಸಂಘಟನೆ ಮುಂಚೂಣಿಯಲ್ಲಿ ನಿಲ್ಲುತ್ತದೆ" ಎಂದರು.

ರಸ್ತೆ ಗುಂಡಿ ಮುಚ್ಚಿ ಶ್ರಮದಾನ:

ಉದ್ಘಾಟನೆ ಬೆನ್ನಲ್ಲೇ ನೂತನ ತಂಡ ಸಮಾಜಮುಖಿ ಕಾರ್ಯಕ್ಕೆ ಇಳಿಯಿತು. ಸುಂಟಿಕೊಪ್ಪ - ಮಾದಾಪುರ ಮುಖ್ಯ ರಸ್ತೆಯ ಅಪಾಯಕಾರಿ ಗುಂಡಿಗಳನ್ನು ಸ್ವತಃ ಶ್ರಮದಾನದ ಮೂಲಕ ಮುಚ್ಚಿ ಸರಿಪಡಿಸಿದರು. ಸಂಘಟನೆಗೆ ಸೇರಿದ ಮೊದಲ ದಿನವೇ ಜನಪರ ಕೆಲಸ ಮಾಡಿದ ಕಾರ್ಯಕರ್ತರನ್ನು ಸಾರ್ವಜನಿಕರು ಹಾಗೂ ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದರು.