Kodagu

ಕೊಡ್ಲಿಪೇಟೆಯಲ್ಲಿ ಕರವೇ ಪದಗ್ರಹಣ - ಅಧ್ಯಕ್ಷರಾಗಿ ಶೋಭಿತ್ ಆಯ್ಕೆ

admincoorgdaily

ಕೊಡ್ಲಿಪೇಟೆಯಲ್ಲಿ ಕರವೇ ಪದಗ್ರಹಣ - ಅಧ್ಯಕ್ಷರಾಗಿ ಶೋಭಿತ್ ಆಯ್ಕೆ
ಸೋಮವಾರಪೇಟೆ: ಕೊಡ್ಲಿಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಸದಸ್ಯರ ಸೇರ್ಪಡೆ ಮತ್ತು ಪದಗ್ರಹಣ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಉಸ್ತುವಾರಿ, ರಾಜ್ಯ ಸಂಚಾಲಕಿ ಶ್ರೀಮತಿ ದೀಪಾ ಪೂಜಾರಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀಮತಿ ಕವಿತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಂಘಟಕ ವಸಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕರವೇ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ದಾಸ್ ಮಾತನಾಡಿ, ಕರವೇಯ ಶಿಸ್ತು, ನಿಯಮಾವಳಿಗಳು ಹಾಗೂ ನಾಡು-ನುಡಿ, ಜಲರಕ್ಷಣೆ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಹೋರಾಟಕ್ಕೆ ಸಿದ್ಧರಿರಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ, ಕುಶಾಲನಗರ ತಾಲೂಕು ಅಧ್ಯಕ್ಷ ಬಿ.ಜೆ. ಅಣ್ಣಯ್ಯ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ದೀಪಾ ಪೂಜಾರಿ ಅವರು, "ಕೊಡ್ಲಿಪೇಟೆಯಲ್ಲಿ ಕರವೇ ಹೋಬಳಿ ಘಟಕ ಅಸ್ತಿತ್ವಕ್ಕೆ ಬಂದಿರುವುದು ಹರ್ಷ ತಂದಿದೆ. ಸ್ಥಳೀಯ ಸಮಸ್ಯೆಗಳಿಗೆ ಹೋರಾಡಿ ನಾಗರಿಕರಿಗೆ ನೆಮ್ಮದಿ ಕೊಡಬೇಕು. ಅಣ್ಣಾ ನಾರಾಯಣ ಗೌಡರ 'ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ' ಘೋಷಣೆಗೆ ಬದ್ಧರಾಗಿ ಕೆಲಸ ಮಾಡಬೇಕು, ಕನ್ನಡ ಭಾಷೆ ಬೆಳೆಸುವ ನಾಡು ಕಟ್ಟುವ ಕಾಯಕ ನಿಮ್ಮಿಂದ ಆಗಬೇಕು" ಎಂದರು.

ನೂತನ ಪದಾಧಿಕಾರಿಗಳು:
ಕೊಡ್ಲಿಪೇಟೆ ಹೋಬಳಿ ಅಧ್ಯಕ್ಷರಾಗಿ ಶೋಭಿತ್, ಪ್ರಧಾನ ಕಾರ್ಯದರ್ಶಿಯಾಗಿ ವಸಂತ್ ಸರ್ವಾನುಮತದಿಂದ ಆಯ್ಕೆ. ಸಂಘಟನೆಗೆ ಶ್ರಮಿಸಿದ ಸುಪ್ರಿತಾ ಅವರನ್ನು ಶಾಲು-ಹಾರ ಹಾಕಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ಉಪಾಧ್ಯಕ್ಷ ಫಯಾಜ್ ಉದ್ದೀನ್, ಪ್ರಧಾನ ಕಾರ್ಯದರ್ಶಿ ಕುಮಾರ್ ದೇವಾಂಗ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸಂತೋಷ್, ಮಹಿಳಾ ಅಧ್ಯಕ್ಷೆ ಆಶಾ, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ, ಕುಶಾಲನಗರ ತಾಲೂಕು ಪ್ರಧಾನ ಕಾರ್ಯದರ್ಶಿ ಗೀತಾ, ಕವಿತಾ, ರೂಪ, ಮೇನಕ, ಮಮತಾ* ಸೇರಿದಂತೆ 60ಕ್ಕೂ ಹೆಚ್ಚು ಕಾರ್ಯಕರ್ತರು ಸೇರ್ಪಡೆಯಾದರು. ಎಲ್ಲರಿಗೂ ಕನ್ನಡ ಶಾಲು ಹಾಕಿ ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು.

ಸಾಮಾಜಿಕ ಜಾಲತಾಣದ ಸೋಮವಾರಪೇಟೆ ತಾಲೂಕು ಕಾರ್ಯದರ್ಶಿ ಬೋಪಯ್ಯ ಅವರು ಕಾರ್ಯಕ್ರಮ ಚಿತ್ರೀಕರಿಸಿದರು. ಸಂಘಟಕ ಅವಿನಾಶ್ ವಂದಿಸಿದರು.