Kodagu

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ದುಡಿ, ತಾಳ ಸೇರಿದಂತೆ ಹಲವು ಪರಿಕರ ವಿತರಣೆ

admincoorgdaily

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ  ದುಡಿ, ತಾಳ ಸೇರಿದಂತೆ ಹಲವು ಪರಿಕರ ವಿತರಣೆ
ಮಡಿಕೇರಿ:-ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ದುಡಿ, ತಾಳ ಹಾಗೂ ಒಡಿಕತ್ತಿಯನ್ನು ಹಲವು ಕುಟುಂಬಗಳಿಗೆ ಗುರುವಾರ ನೀಡಲಾಯಿತು.  

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ದುಡಿ, ತಾಳ ಹಾಗೂ ಒಡಿಕತ್ತಿಯನ್ನು ವಿತರಿಸಿದರು. 

ಚೋಯಮಾಡಂಡ ಕುಟುಂಬ(4 ದುಡಿ), ಪುತ್ತರೀರ ಕುಟುಂಬ(4ದುಡಿ), ಕೊಡಗು ಹೆಗ್ಗೆಡೆ ಸಮಾಜ ಪೊಮ್ಮಕ್ಕಡ ತಂಡ(12 ಜೊತೆ ತಾಳ(24), ನಗರದ ಸುಬ್ರಮಣ್ಯಕೇರಿ(8 ಜೊತೆ ತಾಳ(16), ವಿನಾಯಕ ಕೇರಿಯವರಿಗೆ (12 ಜೊತೆ ತಾಳ(24), ಸಣ್ಣುವಂಡ ಕುಟುಂಬ(4 ದುಡಿ), ಕೊಡಗು ಹೆಗ್ಗಡೆ ಸಮಾಜ ಬಿಟ್ಟಂಗಾಲ (1 ಒಡಿ ಕತ್ತಿ), ಅರಮೇರಿಯ ಐರಿ ಸಮಾಜ (1 ಒಡಿ ಕತ್ತಿ) ನೀಡಲಾಯಿತು.  

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಮಾತನಾಡಿ  ಕೊಡವ ಪದ್ಧತಿ, ಸಂಸ್ಕೃತಿ, ಸಂಸ್ಕಾರವು ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ ಎಂದು ತಿಳಿಸಿದರು. 
ಕೊಡವ ಭಾಷಿಕ ಜನಾಂಗದಲ್ಲಿ ಸಾಂಸ್ಕøತಿಕವಾದ ವಿಶಿಷ್ಟ ಸಂಸ್ಕøತಿ, ಸಂಪ್ರದಾಯ ಮುಖ್ಯವಾಗಿದ್ದು, ಇವುಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ನುಡಿದರು.

ಕೊಡವ ಸಂಸ್ಕೃತಿ, ಪದ್ಧತಿಯನ್ನು ಉಳಿಸಿಕೊಂಡು ಹೋಗುವ ದೃಷ್ಟಿ ಇಟ್ಟುಕೊಂಡು ಅಕಾಡೆಮಿಯ ವತಿಯಿಂದ ದುಡಿ, ತಾಳ, ಮತ್ತಿತರ ಪರಿಕರಗಳನ್ನು ವಿತರಿಸಲಾಗುತ್ತಿದೆ. ಪ್ರತೀ ಬಲ್ಯಮನೆ, ಐನ್‍ಮನೆಗಳಲ್ಲಿ ಹಬ್ಬದ ದಿವಸ, ಮದುವೆ-ತಿಥಿಗಳಂತ ಸಂದರ್ಭದಲ್ಲಿ ದುಡಿಯ ಬಳಕೆಯಾದಲ್ಲಿ ಮಾತ್ರ ಕೊಡವಾಮೆಯ ತನ್ನತನ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

‘ಕೊಡವ ಪದ್ಧತಿಯನ್ನು ದಿನಮಾನಸದಲ್ಲಿ ಇಷ್ಟೊಂದು ಅಭಿಮಾನದಲ್ಲಿ ಉಳಿಸಿ ಬೆಳೆಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿದ್ದರೂ ಕೆಲವೊಂದು ಸ್ಥಳಗಳಲ್ಲಿ ಕೊಡವರಲ್ಲಿ ಸಾವಿನ ಸಂದರ್ಭ ಮದ್ಯ ಸೇವನೆ ಹಾಗೂ ಮದ್ಯ ವಿತರಣೆ ಜನಾಂಗದ ಹೆಸರು ಕೆಡಿಸುವ ಪರಿಸ್ಥಿತಿ ಆಗಬಾರದು. ಸಾವಿನ ಮನೆಯಲ್ಲಿನ ದುಃಖದ ವಾತಾವರಣದಲ್ಲಿ ದಫನ ಕಾರ್ಯ ಆದೊಡನೆ ಮನೆಗೆ ಮರಳಿ ಬಂದದ್ದೇ ಮದ್ಯ ವಿತರಣೆಯೊಂದಿಗೆ ಸಂತೋಷಪಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಹೇಳಿದರು.

ದುಡಿ, ತಾಳ, ಪರಿಕರ ಪಡೆದ ಗಣಪತಿ ಸಿ.ಎಂ.ಅವರು ಮಾತನಾಡಿ ಅನಾದಿಕಾಲದಿಂದಲೂ ಬಂದಿರುವ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು. 

ಚೊಟ್ಟೆಯಂಡ ಸಂಜು ಕಾವೇರಪ್ಪ ಅವರು ಮಾತನಾಡಿ ಸರ್ಕಾರ ಕನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮೂಲಕ ಕೊಡವ ಭಾಷಿಕ ಜನಾಂಗಗಳ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ಜತೆಗೆ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಂದಾಗಲಾಗಿದೆ ಎಂದು ತಿಳಿಸಿದರು.  
ಕೊಡವ ಭಾಷಿಕರು ಮದುವೆ ಸೇರಿದಂತೆ ಶುಭ ಕಾರ್ಯಗಳಲ್ಲಿ ಕುಪ್ಪೆಚಾಲೆ ಉಡುಪು ಧರಿಸಿಕೊಂಡು ಪಾಲ್ಗೊಳ್ಳುವಂತಾಗಬೇಕು. ಇದರಿಂದ ಕೊಡವ ಸಂಸ್ಕøತಿ, ಆಚಾರ-ವಿಚಾರಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.  
ಅಕಾಡೆಮಿ ಸದಸ್ಯರಾದ ನಾಪಂಡ ಗಣೇಶ್, ಮಾಜಿ ಸದಸ್ಯರಾದ ತೋರೇರ ಮುದ್ದಯ್ಯ, ಪರಿಕರ ಪಡೆದ ತೋರೇರ ಪೊನ್ನಕ್ಕಿ, ಸಣ್ಣುವಂಡ ಕಿಶೋರ್ ನಾಚಪ್ಪ ಅವರು ಮಾತನಾಡಿದರು. 

ಅಕಾಡೆಮಿ ಸದಸ್ಯರಾದ ಪುತ್ತರಿರ ಪಪ್ಪು ತಿಮ್ಮಯ್ಯ, ಕೊಂಡಿಜಮ್ಮನ ಎಂ.ಬಾಲಕೃಷ್ಣ, ಕಂಬೆಯಂಡ ಡೀನಾ ಬೋಜಣ್ಣ, ನಾಯಂದಿರ ಆರ್.ಶಿವಾಜಿ, ಪೊನ್ನಿರ ಯು.ಗಗನ್, ಪಾನಿಕುಟ್ಟಿರ ಕೆ.ಕುಟ್ಟಪ್ಪ ಇತರರು ಇದ್ದರು.