Kodagu

ರಾಂಚಿಯಲ್ಲಿ ಕರ್ನಾಟಕಕ್ಕೆ ಕಪ್ - ಗೆದ್ದ ತಂಡದಲ್ಲಿ ಕೊಡಗಿನ 9 ಹೆಣ್ಣುಮಕ್ಕಳು; ಶಾಸಕ ಪೊನ್ನಣ್ಣನಿಂದ ಸನ್ಮಾನ

admincoorgdaily

ರಾಂಚಿಯಲ್ಲಿ ಕರ್ನಾಟಕಕ್ಕೆ ಕಪ್ - ಗೆದ್ದ ತಂಡದಲ್ಲಿ ಕೊಡಗಿನ 9 ಹೆಣ್ಣುಮಕ್ಕಳು; ಶಾಸಕ ಪೊನ್ನಣ್ಣನಿಂದ ಸನ್ಮಾನ
ಗೋಣಿಕೊಪ್ಪಲು:ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ 17 ವರ್ಷದೊಳಗಿನ ಬಾಲಕಿಯರ ಹಾಕಿ ತಂಡ ವಿಜೇತರಾಗಿದ್ದು, ಕರ್ನಾಟಕ ತಂಡದಲ್ಲಿ ಕೊಡಗಿನ KALS ಹಾಗೂ ಜನರಲ್ ತಿಮ್ಮಯ್ಯ ವಿದ್ಯಾ ಸಂಸ್ಥೆಯ 9 ವಿದ್ಯಾರ್ಥಿನಿಯರು ಪ್ರತಿನಿಧಿಸಿದ್ದರು. ಈ ಕ್ರೀಡಾಪಟುಗಳಿಗೆ ಗೋಣಿಕೊಪ್ಪಲಿನ ಅಂತುರ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭಾಗವಹಿಸಿದರು.

ಪ್ರಶಸ್ತಿ ವಿಜೇತ ತಂಡದ ಕ್ರೀಡಾಪಟುಗಳನ್ನು ಸನ್ಮಾನಿಸಿ ಮಾತನಾಡಿದ ಶಾಸಕರು, ನಿಮಗೆ ಉಜ್ವಲ ಭವಿಷ್ಯವಿದ್ದು ನಿರಂತರ ಪ್ರಯತ್ನದಿಂದ ಮತ್ತಷ್ಟು ಸಾಧನೆ ಮಾಡಬಹುದು ಎಂದು ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ಹಾಕಿ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಲು ಕೊಡಗಿನಲ್ಲಿ ಹಲವು ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲೇ ನೆರವೇರಲಿದ್ದು ಸ್ಥಳೀಯ ಕ್ರೀಡಾಪಟುಗಳಿಗೆ ವರದಾನವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಒಲಂಪಿಯನ್ ಬಾಳೆಯಾಡ ಸುಬ್ರಮಣಿ, ಮುಖ್ಯ ತರಬೇತುದಾರ ಅಮ್ಮಂಡ ಕಾರ್ಯಪ್ಪ, ಮಾಜಿ ತರಬೇತುದಾರರಾದ ಬುಟ್ಟಿಯಂಡ ಚಂಗಪ್ಪ, ಚೆಪ್ಪುಡೀರ ಅಪ್ಪಣ್ಣ ಹಾಗೂ ಪ್ರಮುಖರು ಉಪಸ್ಥಿತರಿದ್ದರು.