Kodagu

ಬಾಳುಗೋಡುವಿನಲ್ಲಿ ಅಗ್ನಿ ಚಾಮುಂಡಿ ದೇವಾಲಯದಲ್ಲಿ ಕಾರ್ತಿಕ ಮಾಸದ ವಿಶೇಷ ಪೂಜೆ

admincoorgdaily

ಬಾಳುಗೋಡುವಿನಲ್ಲಿ ಅಗ್ನಿ ಚಾಮುಂಡಿ ದೇವಾಲಯದಲ್ಲಿ ಕಾರ್ತಿಕ ಮಾಸದ ವಿಶೇಷ  ಪೂಜೆ
ವಿರಾಜಪೇಟೆ: ವಿರಾಜಪೇಟೆಯ ಬಾಳುಗೋಡುವಿನಲ್ಲಿರುವ ಅಗ್ನಿ ಚಾಮುಂಡಿ ದೇವಾಲಯದಲ್ಲಿ ಕಾರ್ತಿಕ ಮಾಸದ ಎರಡನೇ ಸೋಮವಾರದ ಪ್ರಯುಕ್ತ ವಿಶೇಷ ಪೂಜೆಗಳನ್ನು ಹಾಗೂ ದೀಪಾರಾಧನೆ ನೆರವೇರಿಸಲಾಯಿತು.

  ಪ್ರತಿ ವರ್ಷದಂತೆ ಈ ವರ್ಷವೂ ಸಹ ಕಾರ್ತಿಕ ಮಾಸದಲ್ಲಿ ಸೋಮವಾರಗಳಂದು ಚಾಮುಂಡಿ ದೇವಿಗೆ ವಿಶೇಷ ಅಭಿಷೇಕ ಹಾಗೂ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ದೇವಾಲಯದ ಆವರಣದಲ್ಲಿ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಕಾರ್ತಿಕ ಸೋಮವಾರದ ಪ್ರಯುಕ್ತ ದೀಪಗಳನ್ನು ಹಚ್ಚಿ ತಮ್ಮ ಹರಕೆ ತೀರಿಸಿದರು. ದೇವರ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಮಂದಿ ಭಕ್ತರು ದೇವಾಲಯಕ್ಕೆ ಆಗಮಿಸಿ ಅಗ್ನಿ ಚಾಮುಂಡಿ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು.