Kodagu

ಕಸ್ತೂರಿ ರಂಗನ್ ವರದಿ ಕರಡು ಪ್ರತಿ ತಿರಸ್ಕಾರ; ರಾಜ್ಯ ಸರ್ಕಾರದ ನಡೆಯನ್ನು ಸ್ವಾಗತಿಸಿದ ಕೊಡಗು ಕಾಂಗ್ರೆಸ್

admincoorgdaily

ಕಸ್ತೂರಿ ರಂಗನ್ ವರದಿ  ಕರಡು ಪ್ರತಿ ತಿರಸ್ಕಾರ; ರಾಜ್ಯ ಸರ್ಕಾರದ ನಡೆಯನ್ನು  ಸ್ವಾಗತಿಸಿದ ಕೊಡಗು ಕಾಂಗ್ರೆಸ್
ಮಡಿಕೇರಿ;ಜನರ ಬದುಕಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯ ಏಳನೇ ಕರಡು ಪ್ರತಿಯನ್ನು ವಿಧಾನ ಮಂಡಲದ ವಿಶೇಷ ಚರ್ಚೆಯಲ್ಲಿ ಸಾರಾಸಗಟಾಗಿ ತಿರಸ್ಕಾರ ಮಾಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದ ತೀರ್ಮಾನವನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಸ್ವಾಗತಿಸಿದ್ದಾರೆ.

ಕೊಡಗು ಜಿಲ್ಲೆ ಸೇರಿದಂತೆ ಇತರ ಐದು ಜಿಲ್ಲೆಗಳ 
ಅನೇಕ ಗ್ರಾಮಗಳ ಜನರು ಕಸ್ತೂರಿ ರಂಗನ್ ವರದಿಯ ಏಳನೇ ಕರಡು ಪ್ರತಿಯ ಘೋಷಣೆಯಿಂದ ಆತಂಕ ಕ್ಕೆ ಒಳಗಾಗಿದ್ದರು.
ಆ ಭಾಗದ ಜನರ ಅಭಿಪ್ರಾಯ ಕ್ಕೆ ಮನ್ನಣೆ ನೀಡಿದ ಕರ್ನಾಟಕ ರಾಜ್ಯ ಸರ್ಕಾರ ತುರ್ತಾಗಿ ಸರ್ವ ಪಕ್ಷದ ಶಾಸಕರ ನಿಲುವು ಪಡೆದು ಉತ್ತಮ ಕಾರ್ಯ ಮಾಡಿದೆ.

ಕೊಡಗಿನ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರು ಪೂರ್ವ ಸಿದ್ದತೆಯೊಂದಿಗೆ 
ಕಸ್ತೂರಿ ರಂಗನ್ ವರದಿಯಿಂದ ಕೊಡಗಿನ 53 ಗ್ರಾಮಗಳಿಗೆ ಆಗುವ ಅನಾಹುತಗಳ ಬಗ್ಗೆ 
ಸದನದಲ್ಲಿ ವಿಚಾರ ಮಂಡನೆ ಮಾಡುವ ಮೂಲಕ ತಮ್ಮ ರಾಜಕೀಯ ರಹಿತ ಬದ್ದತೆಯನ್ನು ಮೆರೆದಿದ್ದಾರೆ.
ಇಬ್ಬರು ಶಾಸಕದ್ವಯರ ಪ್ರಾಮಾಣಿಕ ಪ್ರಯತ್ನಕ್ಕೆ ಕೊಡಗಿನ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುವುದರೊಂದಿಗೆ ಮಾನ್ಯ ಮುಖ್ಯಮಂತ್ರಿಗಳು ,ಉಪ ಮುಖ್ಯಮಂತ್ರಿಗಳು,ಸಚಿವ ಸಂಪುಟದ ಸದಸ್ಯರು ಮತ್ತು ಆಡಳಿತ ಮತ್ತು ವಿರೋಧ ಪಕ್ಷದ ಎಲ್ಲಾ ಶಾಸಕರುಗಳಿಗೆ ಕೊಡಗಿನ ಜನತೆ ಅಭಾರಿಯಾಗಿದ್ದೇವೆ ಎಂದು ತೆನ್ನಿರ ಮೈನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ತನ್ನ  ತೀರ್ಮಾನವನ್ನು ಕೇಂದ್ರಕ್ಕೆ ಕಳಿಸಲಿದ್ದು ಕರ್ನಾಟಕದಿಂದ  ಆಯ್ಕೆಯಾಗಿರುವ ಎಲ್ಲಾ ಸಂಸದರು ಕೇಂದ್ರ ಅರಣ್ಯ ಸಚಿವಾಲಯ,
ಕೇಂದ್ರ ಪರಿಸರ ಸಚಿವಾಲಯ ಹಾಗೂ ಪ್ರಧಾನ ಮಂತ್ರಿಗಳಿಗೆ ಒತ್ತಡ ಹೇರಿ ರಾಜ್ಯದ ಹಿತ ಕಾಪಾಡಬೇಕು ಎಂದು ತೆನ್ನಿರ ಮೈನಾ  ಕರ್ನಾಟಕದ ಸರ್ವ ಸಂಸದರಿಗೆ ಮನವಿ 
ಮಾಡಿದ್ದಾರೆ.