Kodagu

ಕಸ್ತೂರಿರಂಗನ್ ವರದಿ ವೈಜ್ಞಾನಿಕವಲ್ಲ: ಸದನದಲ್ಲಿ ರೈತರ ಪರ ನಿಲುವು ಸ್ಪಷ್ಟಪಡಿಸಿದ ಶಾಸಕ ಡಾ.ಮಂತರ್ ಗೌಡ

admincoorgdaily

ಕಸ್ತೂರಿರಂಗನ್ ವರದಿ ವೈಜ್ಞಾನಿಕವಲ್ಲ: ಸದನದಲ್ಲಿ ರೈತರ ಪರ ನಿಲುವು ಸ್ಪಷ್ಟಪಡಿಸಿದ ಶಾಸಕ ಡಾ.ಮಂತರ್ ಗೌಡ
ಮಡಿಕೇರಿ:- ಕಸ್ತೂರಿರಂಗನ್ ವರದಿ ಕುರಿತು ಇಂದು ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ, ಕೊಡಗಿನ ರೈತರ ಪರವಾಗಿ ನಮ್ಮ ನಿಲುವನ್ನು ಸ್ಪಷ್ಟವಾಗಿ  ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ದಾಖಲಿಸಿದ್ದಾರೆ.

ಕೊಡಗು, ಮಲೆನಾಡು ಹಾಗೂ ಕರಾವಳಿ ಕರ್ನಾಟಕದ ವಾಸ್ತವ ಪರಿಸ್ಥಿತಿಯನ್ನು ಸಮರ್ಪಕವಾಗಿ ಪರಿಗಣಿಸದೆ ರೂಪಿಸಲಾಗಿರುವ ಅವೈಜ್ಞಾನಿಕ ಕಸ್ತೂರಿರಂಗನ್ ವರದಿಯನ್ನು ನಾವು ಸ್ಪಷ್ಟವಾಗಿ ವಿರೋಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಈ ವರದಿಯ ಹೆಸರಿನಲ್ಲಿ ರೈತರ ಕೃಷಿ, ಭೂಮಿ, ಜೀವನೋಪಾಯ ಹಾಗೂ ಬದುಕಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗಲು ಅವಕಾಶ ನೀಡುವುದಿಲ್ಲ. ಕೊಡಗಿನ ರೈತರ ಹಿತಾಸಕ್ತಿಯೊಂದಿಗೆ ಯಾವುದೇ ರಾಜಿ ಇಲ್ಲ. ರೈತರ ಬದುಕಿನ ರಕ್ಷಣೆಗೆ ನಾವು ಕಟಿಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ನಮ್ಮ ನಿಲುವು ಸ್ಪಷ್ಟ:
ಕಸ್ತೂರಿರಂಗನ್ ವರದಿಗೆ ವಿರೋಧ ಮುಂದುವರಿಯಲಿದೆ. ಕೊಡಗಿನ ರೈತರ ಪರ ನಮ್ಮ ಧ್ವನಿ ಸದನದ ಒಳಗೂ ಹೊರಗೂ ಸದಾ ಗಟ್ಟಿಯಾಗಿರಲಿದೆ ಎಂದು ಶಾಸಕ ಡಾ.ಮಂತರ್ ಗೌಡ ತಿಳಿಸಿದ್ದಾರೆ.