ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾದ ಕಾಟೀಮಾಡ ಕುಟ್ಟಪ್ಪ
admincoorgdaily

ಪೊನ್ನಂಪೇಟೆ:ತಾಲೂಕಿನ ನಿಟ್ಟೂರು ಭಾಗದ ಕಾಟೀಮಾಡ ಕುಟ್ಟಪ್ಪ ಅವರು ಬಿಜೆಪಿ ಪಕ್ಷವನ್ನು ತೊರೆದು, ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಕಾರ್ಯವೈಖರಿ ಮತ್ತು ಜನಪರ ಕಾರ್ಯಗಳನ್ನು ಮೆಚ್ಚಿ, ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ಭಾಗಮಂಡಲ ಹಾಗೂ ತಲಾಕಾವೇರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಬಾನಂಡ ಪ್ರತ್ಯು, ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷ ಟಾಟು ಮೊಣಪ್ಪ, ವಲಯ ಅಧ್ಯಕ್ಷ ಪವನ್ ಚಿಟ್ಟಿಯಪ್ಪ, ಬಾಳಲೆ ವಲಯ ಅಧ್ಯಕ್ಷ ಸಂಪನ್ ಸೋಮಣ್ಣ, ಪ್ರಮುಖರಾದ ತಾರ ಅಯ್ಯಮ್ಮ, ಚೋಂದಮ್ಮ ಹಾಗೂ ಪ್ರಮುಖರು ಉಪಸ್ಥಿತರಿದ್ದರು.