Kodagu

ಮೇಷ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದ ಕೊಡಗಿನ ಆರಾಧ್ಯದೈವ ಕಾವೇರಿ ಮಾತೆ

admincoorgdaily

ಮೇಷ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದ ಕೊಡಗಿನ ಆರಾಧ್ಯದೈವ ಕಾವೇರಿ ಮಾತೆ
ತಲಕಾವೇರಿ:ಕೊಡಗಿನ ಕುಲದೇವಿ, ಜೀವನದಿ ಮಾತೆ ಕಾವೇರಿ ಇಂದು ಪವಿತ್ರ ತಲಕಾವೇರಿಯ ತೀರ್ಥಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ್ದಾಳೆ.

ಮೇಷ ಲಗ್ನದ ಶುಭ ಮುಹೂರ್ತದಲ್ಲಿ ನಿಗದಿಯಂತೆ ಕಾವೇರಿ ತೀರ್ಥೋದ್ಭವ ಸಂಭವಿಸಿದೆ. ವೇದಘೋಷ, ಮಂತ್ರಘೋಷಗಳ ನಡುವೆ ತೀರ್ಥಕುಂಡಿಕೆಯಲ್ಲಿ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಉಕ್ಕಿ ಬಂದಿದ್ದಾಳೆ.

ತೀರ್ಥೋದ್ಭವದ ಕ್ಷಣದಲ್ಲಿ 'ಜೈ ಕಾವೇರಿ ಮಾತಾ' ಎಂಬ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ಸಾವಿರಾರು ಭಕ್ತರು ಈ ಪವಿತ್ರ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಕಣ್ತುಂಬಿಕೊಂಡು ಪುನೀತರಾದರು.