ಕೆಲಸವಿಲ್ಲದೆ ಮನನೊಂದು ಕೇರಳದ ಯುವಕ ವಿರಾಜಪೇಟೆಯಲ್ಲಿ ಆತ್ಮಹತ್ಯೆ
admincoorgdaily


ವಿರಾಜಪೇಟೆ: ಕೆಲಸವಿಲ್ಲದೆ ಮನನೊಂದ ಕೇರಳ ರಾಜ್ಯದ ಯುವಕನೊಬ್ಬ ವಿರಾಜಪೇಟೆ ಪಟ್ಟಣದ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ಯುವಕನನ್ನು ಮಹಮ್ಮದ್ ಅಶಾಕ್ (22)ಎಂದು ಗುರುತಿಸಲಾಗಿದೆ. ಈತ ಕೇರಳದ ಕಣ್ಣೂರು ಜಿಲ್ಲೆಯ ಕೆಟ್ಟಿನಾಕಂ ಮುಂಜಪಿಲ್ಲಂಗಾಡ್ ನಿವಾಸಿ ಮಹಮ್ಮದ್ ಅಶ್ರಫ್ ಅವರ ಪುತ್ರ.
ನಿನ್ನೆ ಸಂಜೆ ವಿರಾಜಪೇಟೆ ಮುಖ್ಯ ರಸ್ತೆಯ ಲಾಡ್ಜ್‌ಗೆ ಬಂದು ಕೊಠಡಿ ಪಡೆದು ತಂಗಿದ್ದ. ಇಂದು ಬೆಳಿಗ್ಗೆ ಬಾಗಿಲು ತೆರೆಯದಿದ್ದಾಗ ಲಾಡ್ಜ್ ಸಿಬ್ಬಂದಿ ಹೋಗಿ ನೋಡಿದಾಗ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ವಿರಾಜಪೇಟೆ ನಗರ ಪೊಲೀಸರು ಪರಿಶೀಲನೆ ನಡೆಸಿದರು. ಕುಟುಂಬ ಸದಸ್ಯರು ವಿರಾಜಪೇಟೆಗೆ ಆಗಮಿಸಿ, ಯುವಕ ಕೆಲಸವಿಲ್ಲದೆ ಮನನೊಂದು ಈ ನಿರ್ಧಾರಕ್ಕೆ ಬಂದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತದೇಹವನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಕೇರಳಕ್ಕೆ ತೆಗೆದುಕೊಂಡು ಹೋಗಲಾಗಿದೆ.
ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.