Kodagu

ಚೇಲಾವರದಲ್ಲಿ ಸ್ಪಿಂಕ್ಲರ್ ಪೈಪ್ ಒಳಗಿದ್ದ ಹಾವನ್ನು ರಕ್ಷಿಸಿದ ಕೀರ್ತನ್ ಸೋಮಣ್ಣ

admincoorgdaily

ಚೇಲಾವರದಲ್ಲಿ ಸ್ಪಿಂಕ್ಲರ್ ಪೈಪ್ ಒಳಗಿದ್ದ ಹಾವನ್ನು ರಕ್ಷಿಸಿದ ಕೀರ್ತನ್ ಸೋಮಣ್ಣ
ವಿರಾಜಪೇಟೆ: ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಚೇಲಾವರ ಗ್ರಾಮದಲ್ಲಿ ಮನೆಯೊಂದರ ಬಳಿ ಸ್ಪಿಂಕ್ಲರ್ ಪೈಪ್ (ನೀರು ಸಿಂಪಡಿಸುವ ಪೈಪ್) ಒಳಗೆ ಬಂದು ಸೇರಿಕೊಂಡಿದ್ದ ದೊಡ್ಡ ಗಾತ್ರದ ಹಾವು (ಕಾಳಿಂಗ ಸರ್ಪ)ವನ್ನು ಯುವಕ ಕೀರ್ತನ್ ಸೋಮಣ್ಣ ಯಶಸ್ವಿಯಾಗಿ ರಕ್ಷಿಸಿದ್ದಾರೆ. 

    ಪೈಪ್‌ನ ಒಳಗೆ ಹಾವು ಸೇರಿಕೊಂಡಿರುವುದನ್ನು ಕಂಡು ಸ್ಥಳದಲ್ಲಿದ್ದವರು ಆತಂಕಗೊಂಡಿದ್ದರು. ಕೂಡಲೇ ಕೀರ್ತನ್ ಸೋಮಣ್ಣ ಅವರಿಗೆ ವಿಷಯ ತಿಳಿಸಿದ್ದರು.

ಎಚ್ಚೆತ್ತುಕೊಂಡ ಕೀರ್ತನ್ ಸೋಮಣ್ಣ ಹಾಗೂ ಸ್ನೇಹಿತ ಪ್ರಜ್ವಲ್ ಎಂಬುವವರು ಅವರು ಅತ್ಯಂತ ಜಾಣ್ಮೆ ಹಾಗೂ ಧೈರ್ಯದಿಂದ ಹಾವನ್ನು ಪೈಪ್‌ನಿಂದ ಹೊರತೆಗೆದು, ಸುರಕ್ಷಿತವಾಗಿ ಬಾಕ್ಸ್ನಲ್ಲಿ ಬಂಧಿಸಿದರು. ನಂತರ ವಿರಾಜಪೇಟೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಅರಣ್ಯ ಇಲಾಖೆಯ ಸಹಕಾರದೊಂದಿಗೆ ಹಾವಿಗೆ ಯಾವುದೇ ಅಪಾಯವಾಗದಂತೆ ಸಮೀಪದ ಮಾಕುಟ್ಟ ಅರಣ್ಯದಲ್ಲಿ ಯಶಸ್ವಿಯಾಗಿ ಬಿಡುಗಡೆ ಮಾಡಿದರು. 
  ಸರಿಯಾದ ಸಮಯಕ್ಕೆ ಸ್ಪಂದಿಸಿ, ವನ್ಯಜೀವಿಯ ಪ್ರಾಣ ಉಳಿಸಿದ ಕೀರ್ತನ್ ಸೋಮಣ್ಣ ಅವರ ಈ ಸಾಹಸ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

   ಕೀರ್ತನ್ ಸೋಮಣ್ಣ ಅವರು ಮೂರ್ನಾಡು ಸಮೀಪದ ಹೊದ್ದೂರು ಗ್ರಾಮದ ನಿವಾಸಿಯಾಗಿದ್ದು ಹಾವುಗಳ ಬಗ್ಗೆ ಅಧ್ಯಯನ ವಿಶೇಷ ಆಸಕ್ತಿ ಮತ್ತು ಅಧ್ಯಯನ ನಡೆಸುತ್ತಿದ್ದಾರೆ.