Kodagu

ಗೋಣಿಕೊಪ್ಪ ಕಾವೇರಿ ದಸರಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಿಶೋರ್ ನಾಚಪ್ಪ ಆಯ್ಕೆ

admincoorgdaily

ಗೋಣಿಕೊಪ್ಪ ಕಾವೇರಿ ದಸರಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಿಶೋರ್ ನಾಚಪ್ಪ ಆಯ್ಕೆ
ಗೋಣಿಕೊಪ್ಪ: ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿಯ 48ನೇ ವರ್ಷದ ದಸರಾ ಮಹೋತ್ಸವದ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕಿಶೋರ್ ನಾಚಪ್ಪ ಆಯ್ಕೆಯಾಗಿದ್ದಾರೆ.

ಗೋಣಿಕೊಪ್ಪ ಗ್ರಾ.ಪಂ ದಸರಾ ಕಚೇರಿಯಲ್ಲಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪತ್ರಕರ್ತರ ಒಮ್ಮತದ ಅಭಿಪ್ರಾಯದಂತೆ ಈ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸಮಿತಿ ಪ್ರಮುಖರಾದ ಕಂದಾ ದೇವಯ್ಯ, ದಿಲನ್ ಚಂಗಪ್ಪ, ಚಂದನ್ ಕಾಮತ್ ಹಾಗೂ ಪತ್ರಕರ್ತರಾದ ದಿನೇಶ್, ದತ್ತಾತ್ರೇಯ, ಜಗದೀಶ್ ಜೋಡುಬೀಟಿ, ಸಿಂಗಿ ಸತೀಶ್, ಅಶೋಕ್, ದರ್ಶನ್ ದೇವಯ್ಯ, ಮನೋಜ್ ಕುಮಾರ್, ಪ್ರವೀಣ್, ಶ್ರೀನಿವಾಸ್, ಸಂತೋಷ್ ಉಪಸ್ಥಿತರಿದ್ದರು.