ಗೋಜುರಿಯೋ ಕರಾಟೆಯಲ್ಲಿ ಕೊಡಗಿಗೆ 2ನೇ ಸಮಗ್ರ ಚಾಂಪಿಯನ್ ಪಟ್ಟ
admincoorgdaily

ವಿರಾಜಪೇಟೆ: ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ 20ನೇ ಏಷ್ಯಾ ಮೈಬುಕನ್ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಕೊಡಗು ತಂಡ 2ನೇ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಮ್ಯಾಂಚೆಸ್ಟರ್ ಇಂಟರ್‌ನ್ಯಾಷನಲ್ ಸ್ಕೂಲ್ ವತಿಯಿಂದ ಕೊಯಮತ್ತೂರು ಜಿಲ್ಲೆಯ ಶರವಣಂಪಟ್ಟಿಯಲ್ಲಿ ಏಷ್ಯನ್ ಮೈಬುಕನ್ ಗೋಜುರಿಯೋ ಕರಾಟೆ-ಡು ಇಂಡಿಯಾ ಮತ್ತು ಯೂನಿಯನ್ ಆಫ್ ಗೋಜುರಿಯೋ ಕರಾಟೆ-ಡು ಫೆಡರೇಶನ್ ಆಫ್ ಇಂಡಿಯಾ ಸಹಭಾಗಿತ್ವದಲ್ಲಿ ಚಾಂಪಿಯನ್‌ಶಿಪ್-2026 ನಡೆಯಿತು.
ಇಂಟರ್‌ನ್ಯಾಷನಲ್ ಮೈಬುಕನ್ ಗೋಜುರಿಯೋ ಕರಾಟೆ-ಡು ಇಂಡಿಯಾ ಕೊಡಗು ಶಾಖೆಯ ವಿದ್ಯಾರ್ಥಿಗಳು ವಿವಿಧ ಪ್ರಕಾರಗಳಲ್ಲಿ ಭಾಗವಹಿಸಿ ಒಟ್ಟು 17 ಚಿನ್ನ, 15 ಬೆಳ್ಳಿ ಮತ್ತು 12 ಕಂಚು ಸೇರಿದಂತೆ 44 ಪದಕಗಳನ್ನು ಗೆದ್ದು 2ನೇ ಸಮಗ್ರ ಚಾಂಪಿಯನ್ ಪಟ್ಟ ಪಡೆದರು.
ಪಂದ್ಯಾವಳಿಯ ಮುಖ್ಯ ಸಂಘಟಕ ಶಿಹಾನ್ ಪಾರ್ಥಿಬನ್ ಎಸ್. ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು. ಕೊಡಗು ತರಬೇತಿ ಶಾಲೆಯ ಮುಖ್ಯ ಶಿಕ್ಷಕ ಸೆನ್ಸಾಯ್ ಎಂ.ಬಿ. ಚಂದ್ರನ್ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ಜಿಲ್ಲೆಯ ಜನತೆ ಮುಕ್ತಕಂಠದಿಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
(ವರದಿ: ಕಿಶೋರ್ ಕುಮಾರ್ ಶೆಟ್ಟಿ)