INRC ರ‍್ಯಾಲಿಯಲ್ಲಿ ಕೊಡಗಿನ ಹುಡುಗರ ಹವಾ - ಜಿಪ್ಸಿ ವಿಭಾಗದಲ್ಲಿ ಟೀಮ್ MSPಗೆ ಜಯ
admincoorgdaily

ಪೊನ್ನಂಪೇಟೆ, ಸೆ.21: ಕೊಯಮತ್ತೂರಿನಲ್ಲಿ ಇತ್ತೀಚೆಗೆ ನಡೆದ 2026ನೇ ಸಾಲಿನ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್ (INRC)ನಲ್ಲಿ ಟೀಮ್ ಎಂಎಸ್‌ಪಿ ಜಿಪ್ಸಿ ವಿಭಾಗದಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ಜಿಪ್ಸಿ ವಿಭಾಗದಲ್ಲಿ ಮೇಕೆರೀರ ಕಾರ್ಯಪ್ಪ ಹಾಗೂ ಮೇಕೆರೀರ ಅಭಿನವ್ ಜೋಡಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್‌ಶಿಪ್‌ನಲ್ಲಿ ಗೆಲುವು ಸಾಧಿಸಿತು. ಅವಿನ್ ಅಮ್ಮಣಕುಟ್ಟಂಡ ಹಾಗೂ ಅಭಿಲಾಷ್ ಬಿಎನ್‌ಜಿ ಜೋಡಿ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಈ ಮೂಲಕ ಟೀಮ್ ಎಂಎಸ್‌ಪಿ ಜಿಪ್ಸಿ ವಿಭಾಗದಲ್ಲಿ 1–2 ಸ್ಥಾನಗಳನ್ನು ತನ್ನದಾಗಿಸಿಕೊಂಡಿತು.
ತಂಡದ ತಾಂತ್ರಿಕ ನಿರ್ವಹಣೆಯಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಚೆಪ್ಪುಡೀರ ಮಾಚಯ್ಯ ಅವರಿಗೆ ‘ಬೆಸ್ಟ್ ಟ್ಯೂನರ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚಾಂಪಿಯನ್‌ಶಿಪ್‌ನಲ್ಲಿ ತಂಡದ ಸದಸ್ಯರು ತೋರಿದ ಸಂಘಟಿತ ಪ್ರದರ್ಶನ ಹಾಗೂ ತಾಂತ್ರಿಕ ಸಾಮರ್ಥ್ಯಕ್ಕೆ ಈ ಸಾಧನೆ ಸಾಕ್ಷಿಯಾಗಿದೆ.