Kodagu

ದೆಹಲಿ ಚಲೋ ಪ್ರತಿಭಟನೆಗೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯ ಕೊಡಗು ಸಮಿತಿ ಬೆಂಬಲ

admincoorgdaily

ದೆಹಲಿ ಚಲೋ ಪ್ರತಿಭಟನೆಗೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯ ಕೊಡಗು ಸಮಿತಿ ಬೆಂಬಲ
ಮಡಿಕೇರಿ : ಇಂಡಿಯಾ ಮೈತ್ರಿಕೂಟ ಕೇಂದ್ರ ಸರಕಾರದ ವಿರುದ್ಧ ನ.1ರಂದು ಕರೆ ನೀಡಿರುವ ದೆಹಲಿ ಚಲೋ ಪ್ರತಿಭಟನೆಗೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾ ಸಮಿತಿ ಪೂರ್ಣ ಬೆಂಬಲ ಘೋಷಿಸಿದೆ.

ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ಮೌಲ್ಯಗಳ ಉಳಿವಿಗಾಗಿ ಕೇಂದ್ರ ಮಟ್ಟದಲ್ಲಿ ಕರೆ ನೀಡುವ ಯಾವುದೇ ಕಾನೂನುಬದ್ಧ ಹೋರಾಟಗಳಿಗೆ ವೇದಿಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ವೇದಿಕೆಯ ಕೊಡಗು ಜಿಲ್ಲಾ ಸಂಚಾಲಕ ಡಿ.ಎಸ್.ನಿರ್ವಾಣಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫೋಟೋ :: ನಿರ್ವಾಣಪ್ಪ