Kodagu

ಸೆ.24 ರಂದು ಕೊಡಗು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ

admincoorgdaily

ಸೆ.24 ರಂದು ಕೊಡಗು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ
ಮಡಿಕೇರಿ ಸೆ.23:-ಪ್ರಸಕ್ತ (2026-27) ಸಾಲಿಗೆ ತಾಲ್ಲೂಕು ಮಟ್ಟದಲ್ಲಿ ವಿಜೇತರಾದ ಪುರುಷ ಹಾಗೂ ಮಹಿಳೆಯರಿಗೆ ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆಗಳು ಇಲಾಖೆ ವತಿಯಿಂದ ಸೆಪ್ಟೆಂಬರ್, 24 ರಂದು ನಡೆಯಲಿದೆ. 

ಸೆಪ್ಟೆಂಬರ್, 24 ರಂದು ಕೊಡಗು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವು ಕೂಡಿಗೆ ಕ್ರೀಡಾ ಶಾಲೆ ಮೈದಾನದಲ್ಲಿ ನಡೆಯಲಿದೆ. ಅಥ್ಲೆಟಿಕ್ಸ್, ವಾಲಿಬಾಲ್, ಫುಟ್ಬಾಲ್(ಪುರುಷರಿಗೆ ಮಾತ್ರ), ಖೋಖೋ, ಕಬ್ಬಡಿ, ಬಾಸ್ಕೆಟ್‍ಬಾಲ್, ಕುಸ್ತಿ, ಹಾಕಿ, ಹ್ಯಾಂಡ್‍ಬಾಲ್, ಥ್ರೋಬಾಲ್, ಬಾಲ್‍ಬ್ಯಾಡ್ಮಿಂಟನ್ ಹಾಗೂ ಯೋಗಾಸನ ಹಾಗೂ ಆಯ್ಕೆ ಕ್ರೀಡೆ ಟೆನ್ನಿಸ್, ನೆಟ್‍ಬಾಲ್, ಟೆಕ್ವಾಂಡೋ, ಜುಡೋ, ವುಷು ಮತ್ತು ಕರಾಟೆ. 
ಜಿಲ್ಲಾ ಮಟ್ಟದ ಯೋಗಾಸನದಲ್ಲಿ ಕಡ್ಡಾಯವಾಗಿ ಮಾಡಬೇಕಾದ ಆಸನಗಳು ಪಾದ ಹಸ್ತಾಸನ, ಆಕರ್ಣ ಧನುರಾಸನ, ಊದ್ರ್ವ ಧನುರಾಸನ, ಅರ್ಧ ಮತ್ಸೇಂದ್ರಾಸನ.
ಸೆಪ್ಟೆಂಬರ್, 24 ರಂದು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಷಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಆಯ್ಕೆ ಕ್ರೀಡೆಗಳಾದ ಈಜು-50, 100, 200, 400 ಮೀ. ಫೀ ಸ್ಟೈಲ್,  50, 100, 200-ಬ್ಯಾಕ್ ಸ್ಟ್ರೋಕ್, 50, 100, 200 ಮೀ. ಬ್ರೆಸ್ಟ್ ಸ್ಟ್ರೋಕ್, 50, 100 ಮೀ. ಬಟರ್ ಪ್ಲೈ, 4*100 ಮೀ. ಫ್ರೀ ಸ್ಟೈಲ್ ರಿಲೇ, 4*100 ಮೀ. ಮಿಡ್ಲೆ ರಿಲೇ, 4*50 ಮೀ ಮಿಕ್ಸಡ್ ಪ್ರೀ ಸ್ಟೈಲ್ ರಿಲೇ, 4*50 ಮೀ. ಮಿಕ್ಸಡ್ ಮಿಡ್ಲೆ ರಿಲೇ (ಮುಕ್ತ ಪಂದ್ಯಾವಳಿ) (ಪುರುಷ ಹಾಗೂ ಮಹಿಳೆಯರಿಗೆ)
ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪುರುಷ ಅಥ್ಲೆಟಿಕ್ಸ್ ಹಾಗೂ ಗುಂಪು ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳು ಹಾಗೂ ಜಿಲ್ಲಾ ಮಟ್ಟದಲ್ಲಿರುವ ಕ್ರೀಡೆಗಳಲ್ಲಿ ನೇರವಾಗಿ ಭಾಗವಹಿಸುವ ಜಿಲ್ಲೆಯ ಆಸಕ್ತ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಸಂಪರ್ಕಿಸಬೇಕಾದ ದೂ.ಸಂ.ಮಡಿಕೇರಿ ತಾಲ್ಲೂಕು ಮಹಾಬಲ 9980887499, ಮನು 9480032712, ಸೋಮವಾರಪೇಟೆ ಮತ್ತು ಕುಶಾಲನಗರ ಸುರೇಶ್ 8892272972, ಪ್ರದೀಪ್ 9342563014, ಪೊನ್ನಂಪೇಟೆ ಮತ್ತು ವಿರಾಜಪೇಟೆ ಸುಬ್ಬಯ್ಯ 8197790350 ಹಾಗೂ ಗಣಪತಿ 8951287301 ಇವರನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಅವರು ತಿಳಿಸಿದ್ದಾರೆ. 

ಜಿಲ್ಲಾ ಮಟ್ಟದಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ಸೂಚನೆ: ತಾಲ್ಲೂಕು ಮಟ್ಟದಲ್ಲಿ ನಡೆದ ಅಥ್ಲೆಟಿಕ್ಸ್(ವೈಯಕ್ತಿಕ ಸ್ಪರ್ಧೆ), ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನ ಹಾಗೂ ಗುಂಪು ಸ್ಪರ್ಧೆ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ತಂಡದ ಕ್ರೀಡಾಪಟುಗಳಿಗೆ ಮಾತ್ರ ಅವಕಾಶ. 
ಜಿಲ್ಲಾ ಮಟ್ಟಕ್ಕೆ ಭಾಗವಹಿಸುವ ಕ್ರೀಡಾಪಟುಗಳು ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ ಹಾಗೂ 2 ಪೋಟೋಗಳನ್ನು ಕಡ್ಡಾಯವಾಗಿ ತರಬೇಕು.

 ಜಿಲ್ಲಾ ಮಟ್ಟದ ಕ್ರೀಡೆಗಳಿಗೆ ಆನ್‍ಲೈನ್ ನೋಂದಣಿ ಕಡ್ಡಾಯ ಪೋರ್ಟಲ್ ನಲ್ಲಿ ಬೆಳಗ್ಗೆ 9.30 ರ ಒಳಗೆ ಕಡ್ಡಾಯವಾಗಿ ಸ್ಥಳದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮ ಆಗಿರುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.